ಮತ್ತೆ ಸಂಕಷ್ಟದ ಸುಳಿಯಲ್ಲಿ US ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್!‌

masthmagaa.com:

ಕೊಲೊರಾಡೊ ಕೋರ್ಟ್‌ನ ತೀರ್ಪಿನಿಂದ ಗುರುವಾರವಷ್ಟೇ ಮುಕ್ತಿ ಪಡೆದಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಮೆರಿಕದ ಮೈನೆ ರಾಜ್ಯ ಸರ್ಕಾರ ಕೂಡ ಟ್ರಂಪ್‌ಗೆ ಮುಂಬರೋ US ಪ್ರೆಸಿಡೆನ್ಸಿಯಲ್‌ ಎಲೆಕ್ಷನ್‌ಗೆ ನಿರ್ಬಂಧ ವಿಧಿಸಿ ಆದೇಶ ನೀಡಿದೆ. 2021 ಜನವರಿ 6ರ ಶ್ವೇತ ಭವನದ ಮೇಲಿನ ದಾಳಿಯಲ್ಲಿ ಆಗಿನ ಪ್ರೆಸಿಡೆಂಟ್‌ ಟ್ರಂಪ್‌ ಕೈವಾಡ ಇತ್ತು. ಹೀಗಾಗಿ ಸರ್ಕಾರದ ತಳಹದಿಗೆ ಯಾವುದೇ ಧಕ್ಕೆ ಉಂಟಾಗೋಕ್ಕೆ ನಮ್ಮ ಸಂವಿಧಾನ ಬಿಡಲ್ಲ. ಅದಕ್ಕೆ ಈ ನಿರ್ಧಾರ ಮಾಡಲಾಗಿದೆ ಅಂತ ಮೈನೆ ಸೆಕ್ರೆಟ್ರರಿ ಆಫ್ ಸ್ಟೇಟ್‌ ಶೆನ್ನಾ ಬೆಲ್ಲೋಸ್‌ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಈ ತೀರ್ಪನ್ನು ಪ್ರಶ್ನಿಸಿ ಟ್ರಂಪ್‌ ಮೇಲ್ಮನವಿ ಸಲ್ಲಿಸಲಿದ್ದಾರೆ ಅಂತ ರಿಪಬ್ಲಿಕನ್ ಚುನಾವಣಾ ವಕ್ತಾರ ಸ್ಟೀವನ್‌ ಚೆಯುಂಗ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply