ನಮ್ಮ ತಂಟೆಗೆ ಬರೋ ಮುನ್ನ ಎಚ್ಚರವಿರಲಿ! ಇರಾನ್‌ಗೆ ವಾರ್ನಿಂಗ್‌ ಕೊಟ್ಟ ಅಮೆರಿಕ!

masthmagaa.com:

ಇಸ್ರೇಲ್‌-ಹಮಾಸ್‌ ಸಂಘರ್ಷ ಬೆಳೆದು ಬೇರೆ ಕಡೆ ಹರಡೋದನ್ನ ಅಮೆರಿಕ ತಡೀಬೇಕು ಅಂತ ನಿಮಗೆ ಅನ್ನಿಸಿದ್ರೆ. ನೀವೆಲ್ಲಾ ಇರಾನ್‌ ಮತ್ತು ಅದರ ಪ್ರಾಕ್ಸಿ ಗುಂಪುಗಳಿಗೆ ಇಸ್ರೇಲ್‌ ಅಥವಾ ಅದರ ಮಿತ್ರರಾಷ್ಟಗಳ ವಿರುದ್ಧ ದಾಳಿ ಮಾಡದಂತೆ ತಿಳಿಹೇಳಿ” ಅಂತ ಅಮೆರಿಕ ವಿದೇಶಾಂಗ ಸಚಿವ ಆಂಥನಿ ಬ್ಲಿಂಕನ್‌ ಹೇಳಿದ್ದಾರೆ. ಆ ಮೂಲಕ ಇನ್‌ಡೈರೆಕ್ಟ್‌ ಆಗಿ ಯುದ್ಧದಲ್ಲಿ ಹೆಜ್ಬೊಲ್ಲಾ ಹಸ್ತಕ್ಷೇಪ ಮಾಡಿದ್ರೆ ಪರಿಣಾಮ ನೆಟ್ಟಗಿರೋಲ್ಲ ಅಂತ ಚೀನಾ, ರಷ್ಯಾ ಸೇರಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯ ರಾಷ್ರ್ಟಗಳಿಗೆ ಕರೆ ಕೊಟ್ಟಿದ್ದಾರೆ. “ನಮಗೆ ಇರಾನ್‌ ಜೊತೆಗೆ ಸಂಘರ್ಷಕ್ಕಿಳಿಯಲು ಇಷ್ಟವಿಲ್ಲ. ಈ ಯುದ್ಧ ಸುತ್ತಮುತ್ತಲ ದೇಶಗಳಿಗೆ ಹರಡುವುದೂ ಇಷ್ಟವಿಲ್ಲ. ಆದ್ರೆ ಇರಾನ್‌ ಅಥ್ವಾ ಅದರ ಪ್ರಾಕ್ಸಿ ಗುಂಪುಗಳು ಎಲ್ಲಾದರೂ ಅಮೆರಿಕ ಸಿಬ್ಬಂದಿ ಮೇಲೆ ದಾಳಿ ಮಾಡಿದ್ರೆ, ನಾವು ನಮ್ಮ ಸಿಬ್ಬಂದಿ, ಭದ್ರತೆಯನ್ನ ಡಿಫೆಂಡ್‌ ಮಾಡಿಕೊಳ್ಳೊಕೆ ಏನು ಕ್ರಮ ಬೇಕೋ ಅದನ್ನ ಅತಿ ವೇಗವಾಗಿ ಮಾಡ್ತೀವಿ” ಅಂತ ಇರಾನ್‌ಗೆ ಸರಿಯಾಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ವೇಳೆ ಅವರು ಇಸ್ರೇಲ್‌ಗೆ ತನ್ನನ್ನ ತಾನು ಡಿಫೆಂಡ್‌ ಮಾಡ್ಕೊಳ್ಳೊ ಅಧಿಕಾರ ಇದೆ ಅಂತಾನು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply