ರಾಜ್ಯ ರೇಷನ್‌ ವ್ಯವಸ್ಥೆ ಅಧ್ಯಯನಕ್ಕೆ ಬೆಂಗಳೂರಿಗೆ ಬಂದ ಮಲೇಷ್ಯಾ ನಿಯೋಗ!

masthmagaa.com:

ರಾಜ್ಯ ಪಡಿತರ ವ್ಯವಸ್ಥೆ ಕುರಿತು ಅಧ್ಯಯನ ಮಾಡಲು ಮಲೇಷ್ಯಾದ ಉಪ ಸಚಿವರ ನಿಯೋಗವೊಂದು ರಾಜ್ಯಕ್ಕೆ ಆಗಮಿಸಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯದ ಆಹಾರ ಇಲಾಖೆಯಲ್ಲಿ ಯಾವ ರೀತಿ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನ ತಲುಪಿಸಲಾಗುತ್ತಿದೆ ಮತ್ತು ರೇಷನ್‌ ಕಾರ್ಡ್‌ಗಳನ್ನು ಯಾವ ಮಾದರಿಯಾಗಿ ಜನರಿಗೆ ನೀಡುತ್ತೀರಾ? ಅನ್ನೊ ಮಾಹಿತಿಗಳನ್ನು ಮಲೇಷ್ಯಾದ ಸರ್ಕಾರದ ನಿಯೋಗ ಪಡೆದುಕೊಂಡಿದೆ. ಅಲ್ದೆ ಇನ್ನೂ ಎರಡು ದಿನ ಬೆಂಗಳೂರಿನಲ್ಲಿಯೇ ಉಳಿಯಲಿರೋ ನಿಯೋಗ, ಅಕ್ಕಿಯ ದಾಸ್ತಾನು ಗೋಡೌನ್‌ಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಅಂತ ತಿಳಿದುಬಂದಿದೆ. ಸಭೆ ಬಳಿಕ ಮಾತಾಡಿರುವ ಮುನಿಯಪ್ಪ, ಪಡಿತರ ಬಗ್ಗೆ ನಮ್ಮ ವ್ಯವಸ್ಥೆ ಹೇಗಿದೆ..? ಅಂತ ಅಧ್ಯಯನ ಮಾಡಲು ಬಂದಿದ್ದಾರೆ. ಎಪಿಎಲ್ ಕಾರ್ಡ್ ಏನು? ಎಷ್ಟು ಜನರಿಗೆ ಕೊಡ್ತೀರಿ ಎಂದೆಲ್ಲಾ‌ ವಿವರ ಕೇಳಿದರು. ಅದರ ಸಂಪೂರ್ಣ ವಿವರ ಕೊಟ್ಟಿದ್ದೇವೆ.‌ ನಾವು ಕೂಡ ಈ ಮಾದರಿ ಅಳವಡಿಸಿಕೊಳ್ಳಲು ಯೋಚನೆ ಮಾಡ್ತಿದ್ದಿವಿ ಎಂದಿದ್ದಾರೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply