ಜಿ20 ಔತಣಕೂಟಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆಗಿಲ್ಲ ಆಹ್ವಾನ! ಯಾಕೆ?

masthmagaa.com:

ಇನ್ನೊಂದ್‌ ಕಡೆ ಜಿ20 ಶೃಂಗಸಭೆ ಹಿನ್ನಲೆಯಲ್ಲಿ ಸೆಪ್ಟೆಂಬರ್‌ 9 ಅಂದ್ರೆ ನಾಳೆ ಔತಣಕೂಟ ಆಯೋಜಿಸಲಾಗಿದೆ. ಈ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಮನಮೋಹನ್‌ ಸಿಂಗ್‌ ಮತ್ತು ಎಚ್‌. ಡಿ ದೇವೇಗೌಡ ಅವ್ರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನ ಔತಣಕೂಟಕ್ಕೆ ಆಹ್ವಾನಿಸಲಾಗಿದೆ. ಆದ್ರೆ ಆರೋಗ್ಯ ಸಮಸ್ಯೆಯ ಕಾರಣದಿಂದ ಈ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗ್ತಿಲ್ಲ ಅಂತ ದೇವೇಗೌಡ್ರು ಹೇಳಿದ್ದಾರೆ. ಇತ್ತ ಈ ಭೋಜನಕೂಟಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನ ಆಹ್ವಾನಿಸಿಲ್ಲ ಅಂತ ಅವರ ಕಚೇರಿ ಹೇಳಿದೆ. ಆದ್ರೆ ಈ ಔತಣಕೂಟದಲ್ಲಿ ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನ ಆಹ್ವಾನಿಸಲಾಗಿಲ್ಲ, ಕೇವಲ ಕೇಂದ್ರ ಕ್ಯಾಬಿನೆಟ್‌ ಮತ್ತು ಸ್ಟೇಟ್‌ ಮಿನಿಸ್ಟರ್‌, ಸಿಎಂಗಳು ಹಾಗೂ ಸರ್ಕಾರಗಳ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಗೆಸ್ಟ್‌ಗಳನ್ನ ಇನ್ವೈಟ್‌ ಮಾಡಲಾಗಿದೆ ಅಂತ ಸರ್ಕಾರ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿ20 ಭೋಜನಕೂಟಕ್ಕೆ ವಿರೋಧ ಪಕ್ಷದ ನಾಯಕರನ್ನ ಇನ್ವೈಟ್‌ ಮಾಡದೇ ಇರೋದು ದೇಶದ ಜನಸಂಖ್ಯೆಯ 60% ನಾಯಕರಿಗೆ ಕೇಂದ್ರ ಸರ್ಕಾರ ಗೌರವ ಕೊಡಲ್ಲ ಅನ್ನೋದನ್ನ ತಿಳಿಸುತ್ತೆ ಅಂತ ರಾಹುಲ್‌ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply