RSS ಈಗ ಮೊದಲಿನಂತೆ ಇಲ್ಲ, ಆ ಸಂಘಟನೆ ಕೆಟ್ಟದ್ದಲ್ಲ: ಮಮತಾ ಬ್ಯಾನರ್ಜಿ!

masthmagaa.com:

RSS ಈಗ ಮೊದಲಿನಂತೆ ಇಲ್ಲ. ಆ ಸಂಘಟನೆ ಕೆಟ್ಟದ್ದಲ್ಲ.ಅಲ್ಲೂ ಕೂಡ ಒಳ್ಳೆಯವರು ಇದ್ದಾರೆ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಈ ಬಗ್ಗೆ ಮಾತನಾಡಿದ ಅವರು RSS ಕೆಟ್ಟ ಸಂಘಟನೆ ಅಂತ ನಾನು ಭಾವಿಸುವುದಿಲ್ಲ. ಈಗ ಸಂಘದಲ್ಲಿ ಬಿಜೆಪಿಯವರಂತೆ ಯೋಚನೆ ಮಾಡದ ಕೆಲವು ಒಳ್ಳೇ ಜನ ಕೂಡ ಇದ್ದಾರೆ. ಒಂದಲ್ಲ ಒಂದು ದಿನ ಅವರು ತಾಳ್ಮೆ ಕಳೆದುಕೊಳ್ತಾರೆ. RSS ನವರು ಕೂಡ ಶೀಘ್ರದಲ್ಲೇ ಬಿಜೆಪಿಯನ್ನು ವಿರೋಧಿಸಲಿದ್ದಾರೆ ಅಂತ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಆರೆಸ್ಸೆಸ್‌ ಕುರಿತು ಮಮತಾರಿಂದ ಈ ಅಚ್ಚರಿ ಹೇಳಿಕೆ ಹೊರ ಬರ್ತಿದ್ದಂತೆ ಈ ಸಂಬಂಧ ಪ್ರತಿಕ್ರಿಯೆ ಕೊಟ್ಟಿರೋ AIMIM ಪಕ್ಷದ ಅಸಾದುದ್ದೀನ್‌ ಓವೈಸಿ  ಮಮತಾ ಬ್ಯಾನರ್ಜಿ 2003 ರಲ್ಲಿ RSS ನವರನ್ನ ದೇಶ ಭಕ್ತರು ಅಂತ ಕರೆದೆದ್ರು. ಆದಾದ ನಂತರ RSS ನವರು ಕೂಡ ಮಮತಾ ಬ್ಯಾನರ್ಜಿಯನ್ನ ʻದುರ್ಗಾʼ ಅಂತ ಹೇಳಿದ್ರು. RSS ಒಂದು ಮುಸ್ಲಿಂ ವಿರೋಧಿ ಸಂಘಟನೆ. ಅವರಿಗೆ ಹಿಂದೂ ರಾಷ್ಟ್ರಬೇಕು. ಅದರ ಇತಿಹಾಸವೆಲ್ಲಾ ಮುಸ್ಲಿಂರನ್ನ ದ್ವೇಷಿಸೋದ್ರಲ್ಲೇ ತುಂಬಿಹೋಗಿದೆ. ಗುಜರಾತ್‌ ಹತ್ಯಾಕಾಂಡ ಆದ್ಮೇಲೆ ಸಂಸತ್‌ನಲ್ಲಿ ಬಿಜೆಪಿ ಸರ್ಕಾರವನ್ನ ಮಮತಾ ಬ್ಯಾನರ್ಜಿ ಸಮರ್ಥನೆ ಮಾಡಿಕೊಂಡ್ರು. ಮಮತಾರ ಈ ಸ್ಥಿರತೆ ಹಾಗೂ ಪ್ರಾಮಾಣಿಕತೆಗೆ TMC ಪಕ್ಷದಲ್ಲಿರೋ ಮುಸ್ಲಿಂ ಮುಖಗಳು ಅವರನ್ನ ಹೊಗಳಬೇಕು ಅಂತ ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply