ಅಮೆರಿಕದಲ್ಲಿ ಏಲಿಯನ್ ನೋಡಲು ಏರ್​ಪೋರ್ಟ್​ ಒಳಗೆ ಕಾರು ನುಗ್ಗಿಸಿದ ಭೂಪ!

masthmagaa.com:
ಇನ್ನು ಏಲಿಯನ್​​ಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಲಾಸ್ ವೇಗಾಸ್​​​ನಲ್ಲಿರೋ ಮ್ಯಾಕ್​​ಕರನ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರೊಂದನ್ನು ನುಗ್ಗಿಸಲಾಗಿದೆ. ಭದ್ರತಾ ತಡೆಗಳನ್ನೆಲ್ಲಾ ಡಿಕ್ಕಿ ಹೊಡೆದುಕೊಂಡು ವಿಮಾನದ ಬಳಿ ಹೋದ ಚಾಲಕ ಕೂಡಲೇ ನಿಲ್ಲಿಸಿದ್ದಾನೆ. ನಂತರ ಭದ್ರತಾ ಸಿಬ್ಬಂದಿ ಆತನ ಬಳಿ ಹೋದಾಗ ನನ್ ಹತ್ರ ಸ್ಫೋಟಕ ಇದೆ. ಹತ್ರ ಬಂದ್ರೆ ಉಡಾಯಿಸಿ ಬಿಡ್ತೀನಿ ಅಂತ ಎಚ್ಚರಿಸಿದ್ದಾನೆ. ಹೇಗೋ ಹರಸಾಹಸ ಮಾಡಿ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ವಶಕ್ಕೆ ಪಡ್ಕೊಂಡಿದ್ದಾರೆ. ಇಷ್ಟೆಲ್ಲಾ ದಾಂಧಲೆ ನಡೆಸಿದ ವ್ಯಕ್ತಿ 36 ವರ್ಷದ ಮ್ಯಾಥ್ಯೂಸ್​​ ಅಂತ ಗೊತ್ತಾಗಿದೆ. ವಿಚಾರಣೆ ವೇಳೆ, ನಾನು ವಿಮಾನ ಕದ್ಕೊಂಡು ಏರಿಯಾ 51ಗೆ ಹೋಗಿ, ಏಲಿಯನ್​ಗಳನ್ನು ನೋಡಬೇಕಂತ ಅಂದ್ಕೊಂಡಿದ್ದೆ. ಅದೇ ಕಾರಣಕ್ಕೆ ಏರ್​ಪೋರ್ಟ್​ ನಗ್ಗಿದ್ದು ಅಂತ ಹೇಳಿಕೊಂಡಿದ್ದಾನೆ. ನಂತರ ಕಾರು ಪರಿಶೀಲನೆ ನಡೆಸಿದ್ದಾಗ ಅಲ್ಲಿರೋ ಬಾಂಬು ಕೂಡ ನಕಲಿ ಅಂತ ಗೊತ್ತಾಗಿದೆ.
-masthmagaa.com

Contact Us for Advertisement

Leave a Reply