ಮಾರಿಯೋಪೋಲ್ ನಗರಕ್ಕೆ ಆಹಾರ ಪೂರೈಸಲು ಅವಕಾಶ ಕೊಡಿ: ಯುಕ್ರೇನ್

masthmagaa.com:

ರಷ್ಯಾದಿಂದ ಸುತ್ತುವರಿಯಲ್ಪಟ್ಟಿರೋ ಮಾರಿಯೋಪೋಲ್ ನಗರಕ್ಕೆ ಆಹಾರ ಮತ್ತು ಅಗತ್ಯ ಸಾಮಗ್ರಿಯನ್ನು ಪೂರೈಸಲು ರಷ್ಯಾ ಅವಕಾಶ ನೀಡಬೇಕು ಅಂತ ಯುಕ್ರೇನ್ ಆಗ್ರಹಿಸಿದೆ. ಡೆಪ್ಯುಟಿ ಪ್ರೈಮ್​ ಮಿನಿಸ್ಟರ್ ಇರೈನಾ ವೆರುಶ್ಚುಕ್​, ಮಾರಿಯೋಪೋಲ್​ನಲ್ಲಿ ಮಾನವೀಯ ನೆರವಿಗೆ ಅವಕಾಶ ನೀಡಬೇಕು. ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ನೀಡುವ ಮೂಲಕ ಅಲ್ಲಿನ ಜನ ಬದಕಲು ಬಿಡಬೇಕು ಅಂತ ಒತ್ತಾಯಿಸಿದ್ದಾರೆ. ಅಂದಹಾಗೆ ಮಾರಿಯೋಪೋಲ್​​​​ ನಗರದಲ್ಲಿ ಲಕ್ಷಾಂತರ ಯುಕ್ರೇನಿಯರು ಸಿಲುಕಿದ್ದು ರಷ್ಯಾ ಫುಲ್ ಸುತ್ತುವರಿದಿದೆ.

-masthmagaa.com

Contact Us for Advertisement

Leave a Reply