masthmagaa.com:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾನೂನುಗಳಿಗೆ ಸುಪ್ರೀಂಕೋರ್ಟ್​ ತಡೆ ನೀಡಿ, ಅವುಗಳ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಕಾನೂನುಗಳನ್ನ ವಾಪಸ್ ಪಡೆದೇ ಪಡೆಯುತ್ತೆ. ಆ ರೀತಿ ಒತ್ತಡ ಹೇರಲಾಗುತ್ತೆ. ನನ್ನ ಈ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಿ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪೊಂಗಲ್ ಹಿನ್ನೆಲೆ ತಮಿಳುನಾಡಿನ ಮಧುರೈಗೆ ಬಂದಿದ್ದ ರಾಹುಲ್ ಗಾಂಧಿ ಜಲ್ಲಿಕಟ್ಟು ಸ್ಪರ್ಧೆಯನ್ನ ವೀಕ್ಷಿಸಿ ಬಳಿಕ ಮಾತನಾಡಿದ್ರು. ಕೇಂದ್ರ ಸರ್ಕಾರ ರೈತರನ್ನ ನಿಗ್ರಹಿಸಿ, ಕೆಲವೊಂದು ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡ್ತಿದೆ. ಪ್ರಧಾನಿ ಮಂತ್ರಿಗಳು ರೈತರಿಗೆ ಸೇರಿದ್ದನ್ನು ತಮ್ಮ 2-3 ಸ್ನೇಹಿತರಿಗೆ ಕೊಡಲು ಯತ್ನಿಸುತ್ತಿದ್ದಾರೆ ಅಂತ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇನ್ನು ಚೀನಾ ವಿಚಾರವನ್ನೂ ಪ್ರಸ್ತಾಪಿಸಿ, ನಮ್ಮ ಭೂಪ್ರದೇಶದಲ್ಲಿ ಚೀನಾ ಏನು ಮಾಡ್ತಿದೆ? ಈ ಬಗ್ಗೆ ಪ್ರಧಾನಿ ಮೋದಿ ಯಾಕೆ ಏನೂ ಮಾತಾಡ್ತಿಲ್ಲ? ಅಂತ ಹೇಳಿದ್ರು.

ಇನ್ನು ತಮಿಳುನಾಡು ಸಂಸ್ಕೃತಿ  ಅಂದ್ರೆ ಜಲ್ಲಿಕಟ್ಟು ನೋಡಿ ತುಂಬಾ ಸಂತೋಷವಾಯ್ತು ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ 2016ರ ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ವಾರ್ಷಿಕ ಜಲ್ಲಿಕಟ್ಟು ಸ್ಪರ್ಧೆಯನ್ನ ಬ್ಯಾನ್ ಮಾಡೋದಾಗಿ ಕಾಂಗ್ರೆಸ್​ ಘೋಷಿಸಿಕೊಂಡಿತ್ತು. ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟವನ್ನ ಪ್ರದರ್ಶಿಸಲಾಗಿದೆ. ಈ ಸಂಬಂಧ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಪೊಂಗಲ್​ ಅಂಗವಾಗಿ ತಮಿಳುನಾಡಿಗೆ ಬಂದಿದ್ದಾರೆ. ತಮಿಳುನಾಡಿನಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್​ ರಚಿಸಿದ್ದ ನಾಲ್ವರು ಸದಸ್ಯರ ಕಮಿಟಿಯಿಂದ ಭೂಪಿಂದರ್ ಮನ್ ಅನ್ನೋರು ಹೊರ ಬಂದಿದ್ದಾರೆ. ರೈತ ಸಂಘಟನೆಗಳು ಮತ್ತು ಸಾರ್ವಜನಿಕರ ಸೆಂಟಿಮೆಂಟ್​ ದೃಷ್ಟಿಯಲ್ಲಿಟ್ಟುಕೊಂಡು ಪಂಜಾಬ್ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಮಾಡಲು ಕಮಿಟಿಯಿಂದ ಹೊರಬರುತ್ತಿರೋದಾಗಿ ಅವರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply