ಪಾಕ್‌ನಲ್ಲಿ ಚೀನಿಯರ ಸಾವಿಗೆ ಅವರೇ ಕಾರಣ: ಮರ್ಯಮ್‌ ನವಾಜ್‌

masthmagaa.com:

ಪಾಕ್‌ನಲ್ಲಿ ಚೀನಿಯರ ಮೇಲಿನ ದಾಳಿ ಹೆಚ್ಚಾಗ್ತಿರೋ ನಡುವೆಯೇ ಚಡ್ಡಿ ದೋಸ್ತ್‌ ಚೀನಾಗೆ ಕುಚಿಕು ಪಾಕ್‌ ಈಗ ಸರಿಯಾಗಿ ಬತ್ತಿ ಇಟ್ಟಿದೆ. ಉಗ್ರದಾಳಿಗೆ ಚೀನಿಯರ ಬೇಜವಾಬ್ದಾರಿತನವೇ ಕಾರಣ ಅಂತ ಪಾಕ್‌ ಹೇಳಿದೆ…. ಹೌದು…ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 5 ಚೀನಿ ಇಂಜಿನಿಯರ್‌ಗಳು ಮೃತಪಟ್ಟಿದ್ರು. ಈ ಸಂಬಂಧ ಇದೀಗ ಪಾಕ್‌ನ ಪಂಜಾಬ್‌ ಸಿಎಂ ಹಾಗು ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರ ಪುತ್ರಿ ಮರ್ಯಮ್‌ ನವಾಜ್‌ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪಾಕಿಸ್ತಾನದಲ್ಲಿರೋ ಚೀನಿ ಪ್ರಜೆಗಳು ಸರಿಯಾಗಿ ಭದ್ರತಾ ನಿಯಮಗಳನ್ನ ಪಾಲಿಸ್ತಿಲ್ಲ. ʻಭದ್ರತಾ ನಿಯಮಗಳನ್ನ ಸರಿಯಾಗಿ ಫಾಲೋ ಮಾಡಿ ಅಂತ ಚೀನಿ ಜನರಲ್ಲಿ ಕೇಳಿಕೊಂಡ್ರೆ…. ಸಿಟ್ಟಾಗ್ತಾರೆ. ಇಲ್ಲಿನ ಯಾವ್ದೇ ರೀತಿ ನಿಯಮಗಳನ್ನ ಪಾಲಿಸೋಕೆ ಅವ್ರಿಗೆ ಇಷ್ಟವಿಲ್ಲʼ ಅಂದಿದ್ದಾರೆ. ಅಂದ್ರೆ ನಮ್ಮಲ್ಲಿ ಎಲ್ಲಾ ಸರಿ ಇದೆ. ನಾವು ಭಾರೀ ಸೆಕ್ಯುರಿಟಿ ನೀಡ್ತಿವೆ. ಆದ್ರೆ ಈ ಚೀನಿಯರೇ ಸರಿ ಇಲ್ಲ. ಹೇಳಿದ ಹಾಗೆ ಕೇಳಲ್ಲ ಅನ್ನೋ ರೀತಿಯಲ್ಲಿ ಪಾಕ್‌ನ ರಾಜ್ಯವೊಂದರ ಮುಖ್ಯಮಂತ್ರಿ ಮಾತಾಡಿದ್ದಾರೆ…. ಒಂದ್‌ ಕಡೆ ಮಾಜಿ ಪ್ರಧಾನಿಗಳ ಪುತ್ರಿ, ಉಗ್ರದಾಳಿಗೆ ಚೀನಿಯರ ಮೇಲೆನೆ ಬೊಟ್ಟು ಮಾಡ್ತಿದ್ರೆ, ಮತ್ತೊಂದ್‌ ಕಡೆ ಪಾಕ್‌ ಚೀನಾ ಬಳಿ ಪ್ಯಾಚ್‌ ಅಪ್‌ ಮಾಡ್ಕೊಳೋಕೆ ನೋಡ್ತಿದೆ. ಖುದ್ದು ಪಾಕ್‌ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಚೀನಾಗೆ ಭೇಟಿ ನೀಡ್ತಾ ಇದ್ದಾರೆ. ಉಗ್ರ ದಾಳಿ ಪರಿಣಾಮ ಇದೀಗ ಪಾಕ್‌ನಲ್ಲಿರೋ ಚೀನಾದ ಹಾರ್ಬಿನ್‌ ಎಲೆಕ್ಟ್ರಿಕ್‌ ಇಂಟರ್‌ನ್ಯಾಷನಲ್‌ ಕಂಪನಿ ತನ್ನ ಕೆಲಸವನ್ನ ನಿಲ್ಲಿಸಿದೆ. ತಮ್ಮ ಸೇಫ್ಟಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿ ಪಾಕ್‌ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ಪಾಕ್‌ನ ಮಹತ್ವದ ದಾಸು ಹೈಡ್ರೊಪವರ್‌ ಪ್ರಾಜೆಕ್ಟ್‌ನಲ್ಲಿ ಈ ಕಂಪನಿ ಕೆಲಸ ಮಾಡ್ತಿದೆ. ಚೀನಾ ಕಂಪನಿ ಕೆಲಸ ಸ್ಥಗಿತಗೊಳಿಸಿ ಈ ಪ್ರಾಜೆಕ್ಟ್‌ಗೂ ಅಡ್ಡಿ ಉಂಟಾಗಿದೆ. ಹೀಗಾಗಿ ಹಂಗೋ ಹಿಂಗೋ ಚೀನಾ ಕೈಕಾಲು ಹಿಡಿದು ರಿಲೇಶನ್‌ಶಿಪ್‌ ಮುಂದುವರೆಸೋಣ ಅಂತ ಪಾಕ್‌ ವಿದೇಶಾಂಗ ಸಚಿವರು ಚೀನಾಗೆ ಹೋಗ್ತಿದ್ದಾರೆ.

-masthmagaa.com

Contact Us for Advertisement

Leave a Reply