ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾಧ್ಯಮಗಳ ಯಡವಟ್ಟು!!- ನಿಜಾಂಶ ಇದೇ ಎಂದ ಮಸ್ತ್ ಮಗಾ.com!!

ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕಕ್ಕೆ ಸಂಬಂಧಪಟ್ಟ ಹಾಗೆ ಝೀ ನ್ಯೂಸ್ ಸೇರಿದಂತೆ ದೇಶದ ಕೆಲವು ಪ್ರತಿಷ್ಠಿತ ಮಾಧ್ಯಮಗಳು ಸೆಪ್ಟೆಂಬರ್ 9ನೇ ತಾರೀಖಿಗೆ ಸಿನಿಮಾದ ಬಿಡುಗಡೆ ನಿಗದಿ ಮಾಡಲಾಗಿದೆ ಎಂಬ ಸುದ್ದಿಯನ್ನ ನಿನ್ನೆಯಿಂದ ಪ್ರಸಾರ ಮಾಡುತ್ತಿವೆ.ಈ ಸುದ್ದಿಯ ಸತ್ಯಾಸತ್ಯತೆಯನ್ನ ತಿಳಿಯುವ ಸಲುವಾಗಿ ನಾವು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನವರನ್ನ ಸಂಪರ್ಕ ಮಾಡಿದಾಗ ಈ ಸುದ್ದಿ ಸುಳ್ಳು ಎಂಬ ಮಾಹಿತಿ ಸಿಕ್ಕಿದೆ.

ಸಧ್ಯ ಜುಲೈ 16 ಕ್ಕೆ ನಿಗದಿಯಾಗಿರುವ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕದಲ್ಲಿ  ಬದಲಾವಣೆ ಆಗುವ ಸಾಧ್ಯತೆಗಳ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಇನ್ನಷ್ಟೇ ನಿರ್ಧಾರ ಮಾಡಬೇಕಾಗಿದೆ. ಸಧ್ಯದ ಕೋರೋನ ಪರಿಸ್ಥಿತಿ ಜೊತೆಗೆ ಚಿತ್ರಮಂದಿರಗಳನ್ನು ತೆರೆಯುವ ಸರಕಾರದ ಆದೇಶದ ಮೇಲೆ ಬಿಡುಗಡೆ ದಿನಾಂಕ ನಿಗದಿಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
Contact Us for Advertisement

Leave a Reply