ಕರ್ನಾಟಕ ರಣಜಿ ನಾಯಕ ಮಯಾಂಕ್‌ ಅಗರವಾಲ್‌ ಅಸ್ವಸ್ಥ!

masthmagaa.com:

ಭಾರತದ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್‌ವಾಲ್‌ ವಿಮಾನದಲ್ಲಿ ಅಚಾನಕ್ಕಾಗಿ ಆಸಿಡ್‌ ಕುಡಿದಿರೋ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ರಣಜಿ ತಂಡದೊಂದಿಗೆ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ. ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ಕರ್ನಾಟಕ ತಂಡ ಟ್ರಾವೆಲ್‌ ಮಾಡ್ತಿತ್ತು. ಮಧ್ಯಾಹ್ನ ಮೂರು ಗಂಟೆ ವೇಳೆಗೆ ವಿಮಾನದಲ್ಲಿ ಕುಳಿತಿದ್ದ ಮಯಾಂಕ್‌ ಅಗರ್ವಾಲ್‌ ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನ ಕುಡಿದಿದ್ದಾರೆ. ನೀರು ಕುಡಿಯುತಿದ್ದಂತೆ ನಾಲಿಗೆ, ಬಾಯಿ, ಕೆನ್ನೆ ಸುಟ್ಟು ಹೋದ ಅನುಭವವಾಗಿದೆ. ಮಾತಾಡಲು ಸಾಧ್ಯವಾಗದೆ ಮಯಾಂಕ್‌ ಅಗರ್ವಾಲ್‌ ಸೀಟ್‌ನಲ್ಲಿಯೇ ಒರಗಿ ಬಿದ್ದಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಅವರನ್ನ ಅಗರ್ತಲಾದ ILS ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದಿದ್ದ ಕರ್ನಾಟಕ, ತನ್ನ ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ ಹೋಗ್ತಾ ಇತ್ತು.

ಒಂದು ಕಡೆ ಮಯಾಂಕ್‌ ಅವರನ್ನ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದ್ದರೆ, ಇನ್ನೊಂದ್ಕಡೆ ವಿಮಾನದ ಸಿಬ್ಬಂದಿಗಳು ನೀರಿನ ಬಾಟಲ್‌ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕರ್ನಾಟಕ ರಣಜಿ ತಂಡವಾಗಲಿ, ವಿಮಾನದ ಸಿಬ್ಬಂದಿಯಾಗಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯದ ಮಾಹಿತಿಯ ಪ್ರಕಾರ ವಿಮಾನದ ಸಿಬ್ಬಂದಿ ನೀರಿನ ಬಾಟಲಿ ಇಡುವ ಜಾಗದಲ್ಲಿ ಆಸಿಡ್‌ ಇಟ್ಟಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ನೀರು ಎಂದುಕೊಂಡು ಮಯಾಂಕ್‌ ಅಗರ್ವಾಲ್‌ ಇದನ್ನು ಕುಡಿದಿದ್ದಾರೆ. ಕುಡಿದ ಬೆನ್ನಲ್ಲಿಯೇ ಸುಟ್ಟ ಅನುಭವವಾಗಿದ್ದರಿಂದ ಅಲ್ಲಿಯೇ ಉಗುಳಿದಿದ್ದಾರೆ. ಆಸಿಡ್‌ನ ಅಂಶ ಹೊಟ್ಟಗೆ ಹೋಗಿರುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ಗಮನ ನೀಡಿದ್ದಾರೆ.

-masthmagaa.com

Contact Us for Advertisement

Leave a Reply