ಫೋನ್ ಟ್ಯಾಪಿಂಗ್ ಮಾಡೋದು ತಪ್ಪು: ಎಂ.ಬಿ ಪಾಟೀಲ್

ಫೋನ್ ಟ್ಯಾಪ್ ಮಾಡೋದು ಒಳ್ಳೆಯದಲ್ಲ. ಅದೊಂದು ದೊಡ್ಡ ಅಪರಾಧ ಅಂತ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯಾರದ್ದೇ ಫೋನ್ ಟ್ಯಾಪ್ ಮಾಡಿದ್ರೂ ಅದು ತಪ್ಪು. ಅದರಲ್ಲೂ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡುವುದು ಇನ್ನೂ ದೊಡ್ಡ ಅಪರಾಧ. ಜನ ಸಾಮಾನ್ಯರು, ಪತ್ರಕರ್ತರ ಫೋನ್ ಟ್ಯಾಪ್ ಮಾಡಿದ್ರೂ ದೊಡ್ಡ ತಪ್ಪೇ. ಈ ಹಿಂದೆ ರಾಮಕೃಷ್ಣ ಹೆಗಡೆಯವರು ಫೋನ್ ಟ್ಯಾಪಿಂಗ್ ಕೇಸಲ್ಲಿ ಅಧಿಕಾರ ಕಳೆದುಕೊಂಡಿದ್ದನ್ನು ನಾವು ಮರೆಯಬಾರದು. ಆದ್ರೆ ಫೋನ್ ಕದ್ದಾಲಿಕೆ ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನೋದು ತನಿಖೆಯ ನಂತರ ಗೊತ್ತಾಗುತ್ತೆ ಕಾದು ನೋಡೋಣ ಅಂದ್ರು.

ರಾಜ್ಯದಲ್ಲಿ ಈ ಹಿಂದಿನ ದೋಸ್ತಿ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ನಡೆದಿದೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಮೊನ್ನೆಯಷ್ಟೇ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿದ್ದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅಲ್ಲದೆ ಅವರ ಮನೆಯಲ್ಲಿ ಪೆನ್‍ಡ್ರೈವ್‍ಗಾಗಿ ಹುಡುಕಾಟ ನಡೆಸಿದ್ದರು.

Contact Us for Advertisement

Leave a Reply