ಖಲಿಸ್ತಾನಿ ಉಗ್ರರ ವಿರುದ್ಧ ಭಾರತ ಸೀಕ್ರೆಟ್‌ ಮೆಮೊ ಕಳುಸಿದ್ದು ಫೇಕ್‌: ಅರಿಂದಮ್‌ ಬಾಗ್ಚಿ

masthmagaa.com:

ಖಲಿಸ್ತಾನಿ ಉಗ್ರರ ವಿರುದ್ಧ ಕೇಂದ್ರ ವಿದೇಶಾಂಗ ಸಚಿವಾಲಯ ಸೀಕ್ರೆಟ್‌ ಮೆಮೊ ಕಳುಸಿತ್ತು ಅನ್ನೋ ಮೀಡಿಯಾ ವರದಿಯನ್ನ ಇದೀಗ ಭಾರತ ಖಂಡಿಸಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಸೇರಿ ಖಲಿಸ್ತಾನಿ ಉಗ್ರರ ವಿರುದ್ಧ ಸ್ಟ್ರಾಂಗ್‌ ಆ್ಯಕ್ಷನ್‌ ತಗೊಳಿ ಅಂತ ಭಾರತ ನಾರ್ತ್‌ ಅಮೆರಿಕದ ತನ್ನ ರಾಯಭಾರಿಗಳಿಗೆ ಏಪ್ರಿಲ್‌ನಲ್ಲೇ ಸೀಕ್ರೆಟ್‌ ಮೆಮೊ ಕಳುಸಿದೆ. ಅಂತ ಕೆಲ ಮೀಡಿಯಾಗಳು ವರದಿ ಮಾಡಿವೆ. ಅಂದ್ರೆ ಉಗ್ರ ನಿಜ್ಜರ್‌ನ ಹತ್ಯೆಯಾಗೋ ಎರಡು ತಿಂಗಳ ಮುಂಚೆ ಸೀಕ್ರೆಟ್‌ ಮೆಮೊ ಕಳಿಸಿದ್ರು ಅಂತ ಹೇಳಲಾಗ್ತಿದೆ. ಆದ್ರೆ ʻಈ ರಿಪೋರ್ಟ್‌ಗಳೆಲ್ಲಾ ಫೇಕ್‌. ಮೀಡಿಯಾಗಳು ಹೀಗಂತ ಕಥೆ ಕಟ್ತಾ ಇವೆ. ನಾವು ಆ ರೀತಿಯ ಮೆಮೊಗಳನ್ನ ಕಳಿಸಲೇ ಇಲ್ಲ. ಭಾರತ ವಿರುದ್ಧ ತಪ್ಪು ಮಾಹಿತಿ ನೀಡೋ ಕೆಲಸ ಮಾಡ್ತಿದ್ದಾರೆ. ಅಂದ್ಹಾಗೆ ಈ ರೀತಿ ವರದಿ ಮಾಡಿರೋ ಮೀಡಿಯಾಗಳು ಪಾಕ್‌ ISIನ ಪ್ರೊಪಗಂಡಾ ಪ್ರಚಾರ ಮಾಡೋದ್ರಲ್ಲಿ ತುಂಬಾ ಫೇಮಸ್. ಹೀಗಂತ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply