ಅಮೆರಿಕದ ಜೊತೆಗಿನ ವ್ಯಾಪಾರದಲ್ಲಿ ಚೀನಾವನ್ನ ಹಿಂದಿಕ್ಕಿದ ಮೆಕ್ಸಿಕೊ!

masthmagaa.com:

ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ರು ಅಮೆರಿಕ ಜೊತೆಗಿನ ವ್ಯಾಪಾರದಲ್ಲಿ ನಂ1 ಸ್ಥಾನದಲ್ಲಿದ್ದ ಚೀನಾವನ್ನ ಮೆಕ್ಸಿಕೋ ಬೀಟ್‌ ಮಾಡಿದೆ. ಈ ವರ್ಷದ ಮೊದಲ 4 ತಿಂಗಳ ಅವಧಿಯಲ್ಲಿ ಅಮೆರಿಕ ಹಾಗು ಮೆಕ್ಸಿಕೋ ನಡುವೆ 263 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 21.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳ ಸಾಗಣೆಯಾಗಿದೆ ಅಂತ Federal Reserve Bank of Dallasನ ಅರ್ಥಶಾಸ್ತ್ರಜ್ಞ ಲುಯಿಸ್‌ ಟೊರೆಸ್‌ ಅವ್ರು ಹೇಳಿದ್ದಾರೆ. ಜೊತೆಗೆ ಅಮೆರಿಕ ಹಾಗೂ ಮೆಕ್ಸಿಕೊ ನಡುವಿನ ಆಮದು ಹಾಗೂ ರಫ್ತು ಪ್ರಮಾಣ 15.4%ಗೆ ಏರಿಕೆಯಾಗಿದೆ. ಅಂದ್ಹಾಗೆ ಕೆನಡಾದ ಜೊತೆಯಲ್ಲಿ ಅಮೆರಿಕದ ಒಟ್ಟು ವ್ಯಾಪಾರ 15.2% ಇದ್ರೆ ಚೀನಾ ಜೊತೆಗಿನ ವ್ಯಾಪಾರ 12% ಇದೆ. ಇದೀಗ ಈ ಎರಡೂ ರಾಷ್ಟ್ರಗಳನ್ನ ಹಿಂದಿಕ್ಕಿ ಮೆಕ್ಸಿಕೊ ಮೊದಲ ಸ್ಥಾನ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply