200 ಪ್ರಯಾಣಿಕರಿದ್ದ ವಿಮಾನ ಅಪಘಾತದಿಂದ ಬಚಾವ್!

masthmagaa.com:

200 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಬ್ರಿಟಿಷ್ ಏರ್​​ವೇಸ್​​​​ನ ವಿಮಾನವೊಂದು ದೊಡ್ಡ ಅಪಘಾತವೊಂದ್ರಿಂದ ಜಸ್ಟ್​ ಮಿಸ್ ಆಗಿ ಪಾರಾಗಿದೆ. ಲಂಡನ್​​ನಿಂದ ಡಿಸೆಂಬರ್ 23ರಂದು ಹೊರಟಿದ್ದ ಈ ವಿಮಾನ ಮಧ್ಯ ಅಮೆರಿಕದ ಕೋಸ್ಟಾರಿಕಾಗೆ ಹೋಗ್ಬೇಕಿತ್ತು. ಬೋಯಿಂಗ್ 777 ವಿಮಾನ 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು. ಅದಕ್ಕಿಂತಲೂ 1 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಐಸ್​​ ತುಂಡೊಂದು ಬಂದು, ಕೆಳಗೆ ಹಾರುತ್ತಿದ್ದ ಬ್ರಿಟಿಷ್ ಏರ್​ವೇಸ್​​​​ ವಿಮಾನದ ವಿಂಡ್​ ಗ್ಲಾಸ್​​ಗೆ ತಾಗಿದೆ. ಇದ್ರಿಂದ ವಿಂಡ್​​ಗ್ಲಾಸ್​​ನ 2 ಇಂಚು ದಪ್ಪನಾದ ವಿಂಡ್​​ಗ್ಲಾಸ್​​ ಒಡೆದು ಹೋಗಿದೆ. ಈ ಅಚಾನಕ್ ಆಘಾತದಿಂದ ಕಂಗೆಟ್ಟ ಪೈಲಟ್​ಗಳು​​ ಕೂಡಲೇ ವಿಮಾನವನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್​​ಗೆ ತಿರುಗಿಸಿದ್ದಾರೆ. ಸ್ಯಾನ್​ಜೋಸ್​​ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ರಿಪೇರಿ ಕಾರ್ಯ ತಡವಾಗಿದ್ದರಿಂದ, 50 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಗಿದೆ. ನಂತರ ತಡವಾಗಿ ಅಂದ್ರೆ ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ, ಅಂದ್ರೆ ಕ್ರಿಸ್‌ಮಸ್ ​ಮರುದಿನ ಆಚರಿಸೋ ಹಬ್ಬದಂದು ತಮ್ಮ ಮನೆಗಳಿಗೆ ತೆರಳಿದ್ದಾರೆ. ಒಂದು ಸಣ್ಣ ಮಂಜುಗಡ್ಡೆ 200 ಮಂದಿಯ ಕ್ರಿಸ್​​ಮಸ್​ ದಿನದ ಪ್ಲಾನಿಂಗನ್ನೇ ಕಂಪ್ಲೀಟಾಗಿ ಬುಡಮೇಲು ಮಾಡಿದೆ.

-masthmagaa.com

Contact Us for Advertisement

Leave a Reply