ತಮಿಳುನಾಡಲ್ಲಿ ಮತ್ತೆ PM ಮೋದಿ: ಚೆನ್ನೈನಲ್ಲಿ ಭರ್ಜರಿ ರೋಡ್‌ ಶೋ!

masthmagaa.com:

ತಮಿಳುನಾಡಿನಲ್ಲಿ ಮತ್ತೆ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದಾರೆ. ಸೌತ್‌ ಹಾಗೂ ಸೆಂಟ್ರಲ್ ಚೆನ್ನೈನಲ್ಲಿ ರೋಡ್‌ ಶೋ ನಡೆಸಿದ ಮೋದಿ ಅವ್ರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಾಥ್‌ ನೀಡಿದ್ದಾರೆ. ಏಪ್ರಿಲ್‌ 9ರಿಂದ ಅಂದ್ರೆ ಇಂದಿನಿಂದ ಬರೊಬ್ಬರಿ 4 ದಿನಗಳ ಕಾಲ ಮೋದಿ ತಮಿಳುನಾಡಿನಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಅಂದ್ಹಾಗೆ ಈ ವರ್ಷದಲ್ಲಿ ಮೋದಿ ಏಳನೇ ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದು, ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಆರು ಸ್ಥಾನಗಳನ್ನ ಗೆಲ್ಲೊ ಗುರಿ ಹೊಂದಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply