ಕೇಂದ್ರದ ವಿವಿಧ ಇಲಾಖೆಗಳಿಗೆ ಇನ್ಮುಂದೆ ಖಾಸಗೀ ವ್ಯಕ್ತಿಗಳು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ 25 ಮಂದಿ ಖಾಸಗಿ ಕ್ಷೇತ್ರದ ಸ್ಪೆಷಲಿಸ್ಟ್‌ಗಳಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನ ಕೊಡೋಕೆ ಮುಂದಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕ ಹುದ್ದೆಗಳಿಗೆ ಖಾಸಗೀ ವ್ಯಕ್ತಿಗಳನ್ನ ನೇಮಿಸಿಕೊಳ್ಳೋಕೆ ಸರ್ಕಾರ ಮುಂದಾಗಿದೆ. ಪಿಎಂ ಮೋದಿ ನೇತೃತ್ವದ ಅಪಾಯಿಂಟ್‌ಮೆಂಟ್ಸ್‌ ಕಮಿಟಿ ಆಫ್‌ ದ ಕ್ಯಾಬಿನೇಟ್‌ ಅಥ್ವಾ ACC ಇದನ್ನ ಅಪ್ರೂವ್‌ ಮಾಡಿದೆ. ಸಾಮಾನ್ಯವಾಗಿ ಈ ಹುದ್ದೆಗಳಿಗೆ ಆಲ್‌ ಇಂಡಿಯಾ ಸರ್ವೀಸಸ್‌ ಅಂದ್ರೆ IAS, IPS ಹಾಗೂ ಗ್ರೂಪ್‌ A ಸೇವೆಗಳಲ್ಲಿರೋ ಅಧಿಕಾರಿಗಳನ್ನ ನೇಮಿಸಲಾಗ್ತಿತ್ತು. ಆದ್ರೆ ಈಗ ಖಾಸಗೀ ವಲದಲ್ಲಿರೋ ಪ್ರತಿಭಾನ್ವಿತ ವ್ಯಕ್ತಿಗಳನ್ನ ಸರ್ಕಾರದ ಭಾಗ ಮಾಡ್ಕೊಂಡು, ಆಡಳಿತವನ್ನ ಇನ್ನಷ್ಟು ಸುಲಭ ಮಾಡೋಕೆ ಈ ನಿರ್ಧಾರ ಮಾಡಲಾಗಿದೆ ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply