ʻLICಗೆ ಮೋದಿ ಬಲʼ: ₹7 ಲಕ್ಷ ಕೋಟಿ ಸರಹದ್ದಿಗೆ ದಾಪುಗಾಲು

Masthmagaa.com:

ದಾಖಲೆ ಮೇಲೆ ದಾಖಲೆ ಬರೀತಿರೋ LICಯ ಒಟ್ಟು ಮೌಲ್ಯ ಇತ್ತೀಚೆಗಷ್ಟೇ ₹6 ಲಕ್ಷ ಕೋಟಿ ಕ್ರಾಸ್‌ ಮಾಡಿತ್ತು. ಅಲ್ಲದೆ LICಯ Q3 ವರದಿ ಇನ್ನಷ್ಟೇ ಬರೋದು ಬಾಕಿ ಇದೆ. ಹೀಗಿರೋವಾಗ್ಲೆ LIC ಮಾರುಕಟ್ಟೆ ಮೌಲ್ಯ ₹7 ಲಕ್ಷ ಕೋಟಿ ಮಾರ್ಕನ್ನೂ ಕ್ರಾಸ್‌ ಮಾಡಿದೆ. ಬುಧವಾರ ಪಿಎಂ ಮೋದಿ ರಾಜ್ಯಸಭೆಯಲ್ಲಿ ಮಾತಾಡೋ ವೇಳೆ LICಯನ್ನ ಮೆನ್ಶನ್‌ ಮಾಡಿದ್ರು. LIC ಬಗ್ಗೆ ಹಲವಾರು ವದಂತಿಗಳನ್ನ ಹಬ್ಬಿಸಲಾಯ್ತು, ಆದ್ರೆ ಕಂಪನಿಯ ಷೇರುಗಳು ಈಗ ಮುನ್ನುಗ್ತಿವೇ ಅಂದಿದ್ರು, ಇದ್ರ ಬೆನ್ನಲ್ಲೇ ಗುರುವಾರ LIC ಷೇರು ಮೌಲ್ಯ ಇನ್ನೂ 8% ಜಾಸ್ತಿಯಾಗಿ ಪ್ರತಿ ಷೇರಿಗೆ 1,100ಕ್ಕೆ ತಲುಪಿದೆ. ಇದ್ರ ಜೊತೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌, ₹7 ಲಕ್ಷ ಕೋಟಿ ಕ್ರಾಸ್‌ ಮಾಡಿದೆ.

-Masthmagaa.com

Contact Us for Advertisement

Leave a Reply