ದೇಶಕ್ಕೆ ಲೇಟಾಗಿ ಬರಲಿದೆ ಮುಂಗಾರು ಮಳೆ: ಹವಾಮಾನ ಇಲಾಖೆ

masthmagaa.com:

ಕೇರಳಕ್ಕೆ ನೈರುತ್ಯ ಮಾನ್ಸೂನ್‌ ಆಗಮನ ಸ್ವಲ್ಪ ಲೇಟ್‌ ಆಗಲಿದೆ ಅಂತ ಭಾರತ ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಮಾನ್ಸೂನ್‌ ಆರಂಭದ ದಿನಾಂಕ ಜೂನ್‌ 1 ಆಗಿದ್ದರೂ, ಈ ಬಾರಿ ಜೂನ್‌ 4ರಂದು ಮಲಬಾರ್‌ ಕರಾವಳಿಯನ್ನ ತಲುಪಬಹುದು ಅಂತ ಹವಾಮಾನ ಇಲಾಖೆ ಹೇಳಿತ್ತು. ಆದ್ರೆ IMD ವಿಜ್ಞಾನಿಗಳು ಇನ್ನೂ ಮೂರು ದಿನ ಲೇಟ್‌ ಆಗ್ಬೋದು ಅಂತ ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ ಕೇರಳಕ್ಕೆ ಮಾನ್ಸೂನ್‌ ಜೂನ್‌ 5ರಿಂದ 7ರ ನಡುವೆ ಕಾಲಿಡಲಿದೆ. 2019ರಲ್ಲಿ ಮಾನ್ಸೂನ್‌ ಆಗಮನ ವಿಳಂಬವಾಗಿದ್ದು, ಜೂನ್‌ 6ರ ಬದಲಿಗೆ ಜೂನ್‌ 8ರಂದು ಕೇರಳ ತಲುಪಿತ್ತು.

-masthmagaa.com

Contact Us for Advertisement

Leave a Reply