ಅಮೆರಿಕದಲ್ಲಿ 1918ರ ಸ್ವೈನ್​ಫ್ಲೂಗಿಂದ ಕೊರೋನಾಗೆ ಬಲಿಯಾದವರೇ ಹೆಚ್ಚು!

masthmagaa.com:

ಅಮೆರಿಕದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 1918ರಲ್ಲಿ ಬಂದಿದ್ದ ಸ್ಪ್ಯಾನಿಶ್ ಫ್ಲೂಗೆ ಬಲಿಯಾದವರ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. ಸ್ಪ್ಯಾನಿಶ್​ ಫ್ಲೂಗೆ ಅಮೆರಿಕದಲ್ಲಿ 6,75,000 ಜನ ಪ್ರಾಣ ಕಳ್ಕೊಂಡಿದ್ರು. ಆದ್ರೆ ಕೊರೋನಾಗೆ ಈವರೆಗೆ 6,75,722 ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಗೊತ್ತಾಗಿದೆ. ಮೊದಲ ವಿಶ್ವಯುದ್ಧದ ಕೊನೆಯ ವರ್ಷವಾದ 1918ರಲ್ಲಿ ಶುರುವಾಗಿದ್ದ ಸ್ಪ್ಯಾನಿಶ್ ಫ್ಲೂ ಜಗತ್ತಿನಾದ್ಯಂತ 5 ಕೋಟಿ ಜನರನ್ನು ಬಲಿ ಪಡೆದುಕೊಂಡಿತ್ತು. ಕೊರೋನಾ ಈವರೆಗೆ ಜಾಗತಿಕವಾಗಿ 47 ಲಕ್ಷ ಜನರನ್ನು ಬಲಿ ಪಡೆದುಕೊಂಡಿದೆ. ಇದ್ರಲ್ಲಿ ಅಮೆರಿಕದವರೇ 14 ಪರ್ಸೆಂಟ್ ಇದ್ದಾರೆ. 1918ರಲ್ಲಿ ಜಗತ್ತಿನಲ್ಲಿ ವೈದ್ಯಕೀಯ ಕ್ಷೇತ್ರ ಹಿಂದೆ ಉಳಿದಿತ್ತು. ಮಾಸ್ಕ್, ಸಾಮಾಜಿಕ ಅಂತರ, ಕ್ವಾರಂಟೈನ್, ಕಾಂಟಾಕ್ಟ್ ಟ್ರೇಸಿಂಗ್ ಎಲ್ಲ ಇದ್ರೂ ಈಗಿನಂತೆ ತ್ವರಿತವಾಗಿ ಇರಲಿಲ್ಲ. ಈಗ ಅವೆಲ್ಲವೂ ಇದ್ರೂ ಕೂಡ ಅಮೆರಿಕದಲ್ಲಿ ಸಾವಿನ ಪ್ರಮಾಣ ಈಗಲೇ ಜಾಸ್ತಿ ಇದೆ.

-masthmagaa.com

Contact Us for Advertisement

Leave a Reply