ರಷ್ಯಾದ ಅತಿ ಹಳೆಯ ಮಾನವ ಹಕ್ಕು ಸಂಘಟನೆ ನಿಷೇಧ

masthmagaa.com:

ರಷ್ಯಾ ಸುಪ್ರೀಂಕೋರ್ಟ್​ ದೇಶದ ಅತಿ ಹಳೆಯ ಮಾನವ ಹಕ್ಕು ಸಂಘಟನೆಯನ್ನು ನಿಷೇಧಿಸಿದೆ. ಮೆಮೋರಿಯಲ್ ಅನ್ನೋ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಇದಾಗಿದೆ. ಇದ್ರ ಅಡಿಯಲ್ಲಿ ಇಡೀ ವಿಶ್ವದಾದ್ಯಂತ 50ಕ್ಕೂ ಹೆಚ್ಚು ಸಣ್ಣಪುಟ್ಟ ಸಂಘಟನೆಗಳಿವೆ. ಈ ಸಂಘಟನೆ ಸೋವಿಯತ್ ಒಕ್ಕೂಟವನ್ನು ಭಯೋತ್ಪಾದಕ ದೇಶ ಅನ್ನೋ ರೀತಿ ಚಿತ್ರಿಸುತ್ತೆ ಅನ್ನೋದು ರಷ್ಯಾದ ಆರೋಪ. ಹೀಗಾಗಿಯೇ 2016ರಲ್ಲಿ ಇದನ್ನು ವಿದೇಶಿ ಏಜೆಂಟ್ ಅಂತ ಘೋಷಿಸಿ, ಅದ್ರ ಮೇಲೆ ಹದ್ದಿನ ಕಣ್ಣು ಇಡೋಕೆ ಶುರು ಮಾಡಿತ್ತು. ಅದರಂತೆ ಕಳೆದ ತಿಂಗಳು ಸರ್ಕಾರಿ ಮಹಾಭಿಯೋಜಕರ ಕಚೇರಿ ಕಳೆದ ತಿಂಗಳಷ್ಟೇ ಈ ಸಂಘಟನೆ ನಿಷೇಧಿಸಲು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿತ್ತು. ಅದರಂತೆ ಕೋರ್ಟ್​ ಈಗ ಬ್ಯಾನ್ ಮಾಡಿ ಆದೇಶಿಸಿದೆ. ಈ ನಿರ್ಧಾರಕ್ಕೆ ದೇಶದೆಲ್ಲೆಡೆ ಭಾರಿ ವಿರೋಧ ವ್ಯಕ್ತವಾಗ್ತಿದೆ.

-masthmagaa.com

Contact Us for Advertisement

Leave a Reply