ಅಮೆರಿಕ ಖ್ಯಾತ ನಟ ಪ್ಯಾಟ್ರಿಕ್‌ ಸ್ಟಿವರ್ಟ್‌ ಹೆಸರು ಪಡೆದ ವಿಶ್ವದ ಹಿರಿಯ ಇಲಿ ಇದೇ ನೋಡಿ!

masthmagaa.com:

ಅಮೆರಿಕದ ಸ್ಯಾನ್‌ ಡಿಯಾಗೋ ಝೂ ಒಂದ್ರಲ್ಲಿರೋ ಪೆಸಿಫಿಕ್‌ ಪಾಕೆಟ್‌ ಅನ್ನೊ ಇಲಿಗೆ ಅಮೆರಿಕದ ಖ್ಯಾತ ನಟ ಪ್ಯಾಟ್ರಿಕ್‌ ಸ್ಟಿವರ್ಟ್‌ ಅವ್ರ ಹೆಸರನ್ನ ಇಡಲಾಗಿದೆ.ಈ ಇಲಿಗೆ ಈಗ 9 ವರ್ಷ ಮತ್ತು 209 ದಿನಗಳಾಗಿದ್ದು, ವಿಶ್ವದ ಹಿರಿಯ ಇಲಿ ಎನಿಸಿಕೊಂಡಿದೆ. ಇದರ ದೀರ್ಘ ಜೀವಿತಾವಧಿಯು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ನಲ್ಲೂ ಸೇರ್ಪಡೆಯಾಗಿದೆ. ಜೊತೆಗೆ ಇದರ ತೂಕ 6 ಗ್ರಾಂಗಿಂತಲೂ ಕಡಿಮೆಯಿದ್ದು, ಇದು ಇಲ್ಲಿಗಳಲ್ಲೆ ಅತ್ಯಂತ ಚಿಕ್ಕದಾಗಿದೆ. ಈ ಇಲಿಯು ಬಲಿಷ್ಠವಾಗಿದ್ದು, ಇನ್ನೂ ಬದುಕಲಿದೆ ಅಂತ ಸ್ಯಾನ್‌ ಡಿಯಾಗೋ ಝೂನ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply