ಮಧ್ಯ ಪ್ರದೇಶ: ನರ್ಸರಿ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ್ದ ಶಾಲಾ ಬಸ್‌ ಚಾಲಕನ ಮನೆ ಧ್ವಂಸ

masthmagaa.com:

ಮಧ್ಯ ಪ್ರದೇಶದಲ್ಲಿ ಮೂರುವರೆ ವರ್ಷದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಎಸೆಗಿದ್ದ ಶಾಲಾ ಬಸ್‌ ಚಾಲಕನ ಮನೆಯನ್ನ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಭೋಪಾಲ್‌ನ ಶಾಹಪುರ ಪ್ರದೇಶದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದೆ. ಕಾನೂನುಬಾಹಿರವಾಗಿ ಈತ ಮನೆ ಕಟ್ಟಿಸಿದ್ದ ಅಂತ ಕಾರಣ ನೀಡಲಾಗಿದೆ. ಕಳೆದ ಗುರುವಾರ ಈ ಆರೋಪಿ ಮೂರುವರೆ ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಎಸಗಿ ಅರೆಸ್ಟ್‌ ಆಗಿದ್ದ.

-masthmagaa.com

Contact Us for Advertisement

Leave a Reply