ಮೇ 12ಕ್ಕೆ “MS ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ” ರಿ-ರಿಲೀಸ್‌!

masthmagaa.com:

ನೀರಜ್ ಪಾಂಡೆ ನಿರ್ದೇಶನದ ನಮ್ಮ ದೇಶದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್‌ 2016 ರಲ್ಲಿ ಬಿಡುಗಡೆಯಾಗಿತ್ತು. ಈಗ ಮತ್ತೆ ಮೇ 12 ರಂದು ಹಿಂದಿ, ತಮಿಳು ಮತ್ತು ಭಾರತೀಯ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಗೆ ಸಿದ್ಧವಾಗಿದೆ. ದಿವಂಗತ ಸುಶಾಂತ್ ಸಿಂಗ್ ರಜಪೂತ್ ಈ ಚಿತ್ರದಲ್ಲಿ ಎಂಎಸ್ ಧೋನಿ ಆಗಿ ಕಾಣಿಸಿಕೊಂಡಿದ್ದಾರೆ.

“MS ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ” ಸ್ಟಾರ್ ಸ್ಟುಡಿಯೋಸ್‌ ನಿರ್ಮಾಣದ ವಿಶೇಷವಾದ ಚಿತ್ರವಾಗಿದೆ, ಹಾಗೇ ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ, ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕನ ಸ್ಪೂರ್ತಿದಾಯಕ ಕತೆಯನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. “ಮರು ಬಿಡುಗಡೆಯಿಂದ ದೇಶಾದ್ಯಂತ ಇರುವ ಧೋನಿ ಅಭಿಮಾನಿಗಳಿಗೆ, ಮತ್ತು ದಿವಂಗತ ಸುಶಾಂತ್‌ ಸಿಂಗ್‌ ಅವರನ್ನ ಅಭಿಮಾನಿಗಳಿಗೆ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡುವ ಅವಕಾಶವನ್ನ ನೀಡುವ ಗುರಿಯನ್ನ ಹೊಂದಿದ್ದೇವೆ” ಅಂತ ಡಿಸ್ನಿ ಸ್ಟಾರ್ ಸ್ಟುಡಿಯೋಸ್ ಮುಖ್ಯಸ್ಥ ಬಿಕ್ರಮ್ ದುಗ್ಗಲ್ ಹೇಳಿದ್ದಾರೆ.

ಧೋನಿ ಅವರ ಈ ಬಯೋಪಿಕ್, ಸುಶಾಂತ್ ಸಿಂಗ್‌ ರಜಪೂತ್‌ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಹಿಟ್‌ ಚಿತ್ರಗಳಲ್ಲಿ ಒಂದಾಗಿದೆ.

-masthmagaa.com

Contact Us for Advertisement

Leave a Reply