ಮುಂಬೈಗೆ ‘ಏಷ್ಯಾದ ಬಿಲಿಯನೇರ್‌ ಕ್ಯಾಪಿಟಲ್‌’ ಪಟ್ಟ!

masthmagaa.com:

ಜಗತ್ತಿನಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನ ಹೊಂದಿರೋ ರಾಷ್ಟ್ರಗಳ ಲಿಸ್ಟ್‌ನಲ್ಲಿ ಇದೀಗ ಭಾರತ ಮೂರನೇ ಸ್ಥಾನವನ್ನ ಅಲಂಕರಿಸಿದೆ. ಈ ಪೈಕಿ ಮೊದಲನೇ ಸ್ಥಾನವನ್ನ ಚೀನಾ ಗಳಿಸಿದ್ರೆ, ಎರಡನೇ ಸ್ಥಾನವನ್ನ ಅಮೆರಿಕ ಗಳಿಸಿದೆ. ಹೀಗಂತ ಹುರುನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ 2024 ರಿಪೋರ್ಟ್‌ ರಿಲೀಸ್‌ ಮಾಡಿದೆ. ಇದ್ರ ಪ್ರಕಾರ ವಿಶ್ವದಲ್ಲಿ ಅತೀ ಹೆಚ್ಚು ಬಿಲಿಯನೇರ್‌ಗಳನ್ನ ಹೊಂದಿರೋ ನಗರಗಳ ಲಿಸ್ಟ್‌ನಲ್ಲಿ…ಮುಂಬೈ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಏಷ್ಯಾದ ಬಿಲಿಯನೇರ್‌ ಕ್ಯಾಪಿಟಲ್‌ ಅಥ್ವಾ ರಾಜಧಾನಿ ಅನ್ನೋ ಹೆಗ್ಗಳಿಕೆ ಮುಂಬೈ ಪಾಲಾಗಿದೆ. ಜೊತೆಗೆ ಚೀನಾವನ್ನ ಭಾರತ ಹಿಂದಿಕ್ಕಿದೆ. ಈ ಲಿಸ್ಟ್‌ನಲ್ಲಿ ನ್ಯೂಯಾರ್ಕ್‌ ನಗರ ಮೊದಲನೇ ಸ್ಥಾನದಲ್ಲಿದ್ರೆ…ಲಂಡನ್‌ ಎರಡನೇ ಸ್ಥಾನದಲ್ಲಿದೆ. ಚೀನಾದ ಬೀಜಿಂಗ್‌ ನಗರ ನಾಲ್ಕನೇ ಸ್ಥಾನದಲ್ಲಿದೆ. ಜೊತೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್‌ ಅಂಬಾನಿ ಟಾಪ್‌ 10 ಬಿಲಿಯನೇರ್ಸ್‌ ಲಿಸ್ಟ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಈ ಲಿಸ್ಟ್‌ನ ಮೊದಲನೇ ಸ್ಥಾನದಲ್ಲಿ ಟೆಸ್ಲಾ CEO ಎಲಾನ್‌ ಮಸ್ಕ್‌ ಇದ್ರೆ, ಅಮೇಜಾನ್‌ನ ಸಂಸ್ಥಾಪಕ ಜೆಫ್‌ ಬೆಜೋಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಈ ರಿಪೋರ್ಟ್‌ ಪ್ರಕಾರ ಇಡೀ ವಿಶ್ವದಲ್ಲಿ ಈಗ ಒಟ್ಟು 3,279 ಬಿಲಿಯನೇರ್‌ಗಳು ಇದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply