ಅಮೆರಿಕದ ವೈಟ್‌ಹೌಸ್‌ನ ಇಫ್ತಾರ್‌ ಕೂಟವನ್ನ ತಿರಸ್ಕರಿಸಿದ ಮುಸ್ಲಿಂಮರು!

masthmagaa.com:

ರಂಜಾನ್‌ ಪ್ರಯುಕ್ತ ಅಮೆರಿಕದ ವೈಟ್‌ಹೌಸ್‌ನಲ್ಲಿ ಆಯೋಜಿಸಿದ್ದ ಇಫ್ತಾರ್‌ ಔತಣ ಕೂಟದ ಆಹ್ವಾನವನ್ನ ಅಲ್ಲಿನ ಮುಸ್ಲಿಂ ಸಮುದಾಯ ತಿರಸ್ಕರಿಸಿದೆ. ಗಾಜಾ ಯುದ್ದ ವಿಚಾರವಾಗಿ ಇಸ್ರೇಲ್‌ಗೆ ಬೈಡನ್‌ ಸರ್ಕಾರ ಬೆಂಬಲ ನೀಡ್ತಿರೋದ್ರಿಂದ ಮುಸ್ಲಿಂ ಸಮುದಾಯ ಈ ತೀರ್ಮಾನ ಮಾಡಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಇಫ್ತಾರ್ ಕೂಟದ ಆಯೋಜನೆ ಮುಂದಾಗಿದ್ದ ವೈಟ್‌ಹೌಸ್‌‌, ತನ್ನ ಕಚೇರಿ ಸಿಬ್ಬಂದಿಗಳಿಗಾಗಿ ಸಣ್ಣ ಔತಣ ಕೂಟ ಆಯೋಜಿಸಲು ನಿರ್ಧರಿಸಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

-masthmagaa.com

Contact Us for Advertisement

Leave a Reply