ಸಿಂಗಾಪುರ್‌ನತ್ತ ದೌಡಾಯಿಸಿದ ಚೀನಾದ ಬಿಲಿಯನೇರ್ಸ್‌! ಕಾರಣವೇನು?

masthmagaa.com:

ಚೀನಾದ ಬಿಲಿಯನೇರ್‌ಗಳೆಲ್ಲ ತಮ್ಮ ಸಂಪತ್ತಿನ ರಕ್ಷಣೆಗಾಗಿ ಸಿಂಗಾಪುರ್‌ನಲ್ಲಿ ನೆಲೆಸೋಕೆ ಪ್ರಯಾಣ ಬೆಳೆಸಿದ್ದಾರೆ. ಇತ್ತೀಚೆಗೆ ಟೆಕ್‌ ಬಿಲಿಯನೇರ್‌ಗಳು ಮತ್ತು ತೆರಿಗೆ ಕಟ್ಟದ ಸೆಲಿಬ್ರೆಟಿಗಳ ಮೇಲೆ ಚೀನಾ ಸರ್ಕಾರ ಕೆಲವು ಕ್ರಮ ಕೈಗೊಂಡಿತ್ತು. ಆ ಟೈಮ್‌ನಲ್ಲಿ ಏಷ್ಯಾದ ಪ್ರತಿಷ್ಠಿತ ಬ್ಯುಸಿನೆಸ್‌ಮ್ಯಾನ್‌ ಜಾಕ್‌ ಮಾ ಅವ್ರು ಸುಮಾರು 25 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ರು. ಹೀಗಾಗಿ ಚೀನಾದ ಶ್ರೀಮಂತ ವರ್ಗ ಇದೇ ರೀತಿ ನಮಗೂ ಆಗ್ಬೋದು ಅಂತ ತಮ್ಮ ಸಂಪತ್ತನ್ನ ಪ್ರೊಟೆಕ್ಟ್‌ ಮಾಡಿಕೊಳ್ಳೋಕೆ ಸುರಕ್ಷಿತ ಜಾಗವನ್ನ ಹುಡುಕ್ತಿದಾರೆ. ಸಿಂಗಾಪುರ್‌ ಬ್ಯುಸಿನೆಸ್‌ ಹಾಗೂ ತೆರಿಗೆ ವಿಚಾರದಲ್ಲಿ ತುಂಬಾ ಸೇಫ್‌ ಅಂತ ಪರಿಗಣಿಸಲಾಗುತ್ತೆ. ಈ ಹಿನ್ನಲೆಯಲ್ಲಿ ಚೀನಾದ ರಿಚ್‌ ಫ್ಯಾಮಿಲಿಗಳು ಸಿಂಗಾಪುರ್‌ ಕಡೆ ಪ್ರಯಾಣ ಮಾಡ್ತಿದಾರೆ. ಇನ್ನು ಈ ರೀತಿ ಹೋಗ್ತಿರೋರೆಲ್ಲಾ ನಮ್ಮ ಹಣ ನಮ್ಮದು ಅದು ಸಿಂಗಪೂರ್‌ನಲ್ಲಿ ಸುರಕ್ಷಿತವಾಗಿರುತ್ತೆ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply