ಇನ್‌ಸ್ಟಾಗ್ರಾಮ್‌ನಲ್ಲಿ ಅಷ್ಟೆಲ್ಲಾ ದುಡ್ಡು ಬರಲ್ಲ ಅಂತ ಕೊಹ್ಲಿ ಹೇಳಿದ್ಯಾಕೆ?

masthmagaa.com:

ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಲು ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು 11.45 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಾರೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸ್ವತಃ ಕೊಹ್ಲಿಯವರೇ ಈ ಸುದ್ಧಿ ಸುಳ್ಳು ಅಂತ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಶೆಡ್ಯೂಲಿಂಗ್ ಟೂಲ್ ಹೂಪರ್ ಹೆಚ್‌ಕ್ಯು, ಇನ್‌ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಲು ಸೆಲೆಬ್ರೆಟಿಗಳು ಎಷ್ಟು ಶುಲ್ಕ ವಿಧಿಸುತ್ತಾರೆ ಅನ್ನೋದ್ರ ಬಗ್ಗೆ ವರದಿ ಮಾಡಿತ್ತು. ಈ ವರದಿಯ ಪ್ರಕಾರ, ಅಗ್ರ 19ರಲ್ಲಿ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ, ಒಂದು ಇನ್​ಸ್ಟಾ ಪೋಸ್ಟ್​ಗೆ ಬರೋಬ್ಬರಿ 11.45 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಾರೆ ಅಂತ ಹೇಳಲಾಗಿತ್ತು. ಈ ಸುದ್ಧಿಗೆ ಪ್ರತಿಕ್ರಿಯಿಸಿ Xನಲ್ಲಿ ಪೋಸ್ಟ್‌ ಹಾಕಿರುವ ಕೊಹ್ಲಿ, ನಾನು ಈ ಜೀವನದಲ್ಲಿ ಏನೆಲ್ಲ ಪಡೆದುಕೊಂಡಿದ್ದೇನೋ ಅದಕ್ಕೆ ಕೃತಜ್ಞನನಾಗಿದ್ದೇನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಾನು ಗಳಿಸುತ್ತಿರುವ ಆದಾಯದ ಬಗ್ಗೆ ಬಂದಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply