ನನ್ನ ಅಜ್ಜಿಯೆ ನನ್ನ ಶಕ್ತಿ: ರಾಹುಲ್‌ ಗಾಂಧಿ

masthmagaa.com:

ಇಂದು ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವ್ರ 39ನೇ ಪುಣ್ಯಸ್ಮರಣೆ. ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾವುಕ ಪೋಸ್ಟ್‌ ಒಂದನ್ನ ಹಾಕಿದ್ದಾರೆ. X ನಲ್ಲಿ ಅವರು “ನನ್ನ ಅಜ್ಜಿಯೆ ನನ್ನ ಶಕ್ತಿ, ದೇಶಕ್ಕಾಗಿ ಅವ್ರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದ್ರಿಂದ್ಲೆ ನಾನು ಈ ಭಾರತವನ್ನ ಕಾಪಾಡ್ತೇನೆ. ನನ್ನ ಹೃದಯದಲ್ಲಿ ಅವರ ನೆನಪುಗಳು ಯಾವಾಗ್ಲು ಇರುತ್ತವೆ” ಅಂತ ಪೋಸ್ಟ್‌ ಮಾಡಿದ್ದಾರೆ. ನಂತರ ದೆಹಲಿಯ ಇಂದಿರಾ ಗಾಂಧಿ ಸಮಾಧಿ ʻಶಕ್ತಿ ಸ್ಥಳʼಕ್ಕೆ ಕಾಂಗ್ರೆಸ್‌ ಮುಖಂಡರೊಡನೆ ಭೇಟಿ ನೀಡಿ ನಮಿಸಿದ್ದಾರೆ. ಅಲ್ಲದೆ ಎಲ್ಲಾ ಪಕ್ಷಗಳ ಗಣ್ಯರು ತಮ್ಮ ಸೋಶಿಯಲ್‌ ಮೀಡಿಯ ಪೋಸ್ಟ್‌ಗಳಲ್ಲಿ ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply