ಮಯನ್ಮಾರ್‌ನಲ್ಲಿ ಹಿಂಸಾಚಾರ: ಸೇನಾ ಸರ್ಕಾರದ ಆಡಳಿತ ವಿಫಲ!

masthmagaa.com:

ಮಯನ್ಮಾರ್‌ನಲ್ಲಿ ಸದ್ಯ ಭಾರಿ ಹಿಂಸಾಚಾರ ನಡೆತಿದೆ. ಹಾಗೂ ಅಲ್ಲಿನ ಸೇನಾ ಆಡಳಿತದ ವಿರುದ್ದ ಭಾರಿ ಪ್ರತಿರೋಧ ಕೇಳಿ ಬರ್ತಿದೆ ಅಂತ ವಿಶ್ವ ಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ. ಪ್ರಜಾ ಪ್ರಭುತ್ವ ವಿರೋಧಿ ಆಡಳಿತ ನಡೆಸ್ತಿರೊ ಸೇನೆ ಮಯನ್ಮಾರ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಲ್ಲಿನ ಸಶಸ್ತ್ರ ಗುಂಪುಗಳು ಸರ್ಕಾರದ ವಿರುದ್ದ ದಾಳಿ ನಡೆಸ್ತಿವೆ. ಈ ದಾಳಿಗಳನ್ನ ಹಿಮ್ಮೆಟ್ಟಿಸಲು ಸೇನಾ ಸರ್ಕಾರ ವಿಫಲವಾಗಿದೆ. ಜೊತೆಗೆ ಸಶಸ್ತ್ರ ಗುಂಪುಗಳ ದಾಳಿಗೆ ಪ್ರತಿಯಾಗಿ ಸೇನಾ ಸರ್ಕಾರ ನಾಗರಿಕರ ಮೇಲೂ ದಾಳಿ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿದೆ ಅಂತ ಮಾನವ ಹಕ್ಕುಗಳು ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply