ಚೀನಾ ಮಾತಿಗೆ ಕಿಮ್ಮತ್ತು ಕೊಡದ ಮಯನ್ಮಾರ್:‌ ಸೀಜ್‌ಫೈರ್‌ ಬ್ರೇಕ್

masthmagaa.com:

ಮಯನ್ಮಾರ್‌ ಮಿಲಿಟರಿ ಸರ್ಕಾರ ಹಾಗೂ ರೆಬೆಲ್‌ಗಳ ನಡುವೆ ಚೀನಾ ಮಧ್ಯಸ್ಥಿಕೆಯಲ್ಲಿ ಸೀಜ್‌ಫೈರ್‌ ಒಪ್ಪಂದ ಮಾಡಲಾಗಿತ್ತು. ಆದ್ರೆ ಈ ಸೀಜ್‌ ಫೈರ್‌ ವರ್ಕ್‌ ಆದಂಗೆ ಕಾಣ್ತಿಲ್ಲ. ಮಯನ್ಮಾರ್‌ನಲ್ಲಿ ಅನೇಕ ಜನಾಂಗೀಯ ಸಶಸ್ತ್ರ ಗುಂಪುಗಳು ಆರ್ಮಿ ಆಡಳಿತದ ಮೇಲೆ ದಂಗೆದ್ದಿವೆ. ಈಗ ಅಂತದ್ದೇ ಗುಂಪೊಂದು ಭಾರತ-ಬಾಂಗ್ಲಾ ಗಡಿ ಬಳಿ ಇರೋ ಟೌನ್‌ ಒಂದ್ರ ಮೇಲೆ ಹಿಡಿತ ಸಾಧಿಸಿದ್ಧೀವಿ ಅಂತ ಹೇಳ್ಕೊಂಡಿದೆ. ಆರಕನ್‌ ಆರ್ಮಿ ಅನ್ನೋ ಗುಂಪು ಕಾಲಾದನ್‌ ನದಿ ಬಳಿ ಇರೋ ಪಟೆಟ್ವಾ ಟೌನನ್ನ ವಶಪಡಿಸಿಕೊಂಡಿವೆ. ಭಾನುವಾರವೇ ರೆಬೆಲ್‌ ಗುಂಪುಗಳು ಸೀಜ್‌ಫೈರ್‌ ಬ್ರೇಕ್‌ ಮಾಡಿ ಹಲವು ಟೌನ್‌ಶಿಪ್‌ಗಳ ಮೇಲೆ ದಾಳಿ ನಡೆಸಿದ್ವು. ಇದೀಗ ಈ ಸಂಘರ್ಷ ಇನ್ನಷ್ಟು ಜಾಸ್ತಿಯಾಗಿದೆ.

-masthmagaa.com

Contact Us for Advertisement

Leave a Reply