masthmagaa.com:

ಜಗತ್ತಿನ ವಿವಿಧ ದೇಶಗಳಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದ ‘ಮೋನೋಲಿತ್’ ಇದೀಗ ಭಾರತದಲ್ಲೂ ಪ್ರತ್ಯಕ್ಷವಾಗಿದೆ. ಹೌದು, ಗುಜರಾತ್​ನ ಅಹಮದಾಬಾದ್​ನ ಪಾರ್ಕ್​ ಒಂದರಲ್ಲಿ ಈ ನಿಗೂಢ ಕಂಬ ಕಾಣಿಸಿಕೊಂಡಿದೆ. ಸುಮಾರು 6 ಅಡಿ ಎತ್ತರವಿರುವ ಈ ಕಂಬವನ್ನ ಭೂಮಿ ಮೇಲೆ ನಿಲ್ಲಿಸಿದ್ರೂ ಕಂಬ ಇರುವ ಜಾಗದಲ್ಲಿ ಮಣ್ಣನ್ನ ಅಗೆದಿರುವ ಯಾವುದೇ ಕುರುಹು ಇಲ್ಲ. ಈ ಕಂಬದ ಮೇಲೆ ಒಂದಷ್ಟು ನಂಬರ್​ಗಳು ಇವೆ.

ಇದನ್ನ ಇಟ್ಟವರು ಯಾರು, ಯಾಕೆ ಇಟ್ಟರು, ಹೇಗೆ ಇಟ್ಟರು ಅನ್ನೋದು ಯಾರಿಗೂ ಗೊತ್ತಿಲ್ಲ. ಇದುವರೆಗೆ ಜಗತ್ತಿನ ಸುಮಾರು 30 ನಗರಗಳಲ್ಲಿ ಈ ಮೋನೋಲಿತ್​ಗಳು ಕಾಣಿಸಿಕೊಂಡು ಬಳಿಕ ನಿಗೂಢ ರೀತಿಯಲ್ಲೇ ಕಣ್ಮರೆಯಾಗ್ತಿವೆ. ಭಾರತದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಅಂದ್ಹಾಗೆ ಕಳೆದೊಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಮೋನೋಲಿತ್​ಗಳ ಬಗ್ಗೆ ಸಾಕಷ್ಟು ವಾದ-ವಿವಾದ ಆಗ್ತಿದೆ. ಇವು ಏಲಿಯನ್​ ಕಂಬಗಳು, ಏಲಿಯನ್​ಗಳೇ ಇವುಗಳನ್ನ ಭೂಮಿಗೆ ತಂದು ಇಟ್ಟು ಹೋಗ್ತಿವೆ ಅಂತ ಕೆಲವರು ಹೇಳಿದ್ರೆ.. ಇನ್ನೂ ಕೆಲವರು ಇದೆನ್ನೆಲ್ಲಾ ಯಾರೋ ಸುಮ್ನೆ ಮಾಡ್ತಿದ್ದಾರೆ ಅಂತ ಹೇಳ್ತಿದ್ದಾರೆ. ಒಟ್ನಿನಲ್ಲಿ ಈ ನಿಗೂಢ ಕಂಬಗಳು ಕುತೂಹಲ ಕೆರಳಿಸಿರೋದಂತೂ ಸತ್ಯ.

-masthmagaa.com

Contact Us for Advertisement

Leave a Reply