ಅಮೆರಿಕಕ್ಕೆ ಮತ್ತೆ ಆವಾಜ್ ಹಾಕಿದ ಕೊರಿಯಾದ ಕಿಮ್ಮಣ್ಣ

masthmagaa.com:

ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತೆ ಅಮೆರಿಕ ಮೇಲೆ ವಾಗ್ದಾಳಿ ಮಾಡಿದ್ದಾರೆ. ಪ್ರಪಂಚದ ಈ ಭಾಗದಲ್ಲಿ, ಅಂದ್ರೆ ಕೊರಿಯಾ ಭಾಗದಲ್ಲಿ ಅಶಾಂತಿಗೆ, ಟೆನ್ಶನ್‌ಗೆ ಅಮೆರಿಕವೇ ಮೂಲ ಕಾರಣ ಅಂತ ನೇರವಾಗಿ ಆರೋಪ ಮಾಡಿದ್ದಾರೆ ಅಂತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ‘ಸೆಲ್ಫ್ ಡಿಫೆನ್ಸ್ 2021’ ಹೆಸರಿನ ಡಿಫೆನ್ಸ್ ಎಕ್ಸ್ಪೋ ಉದ್ಘಾಟಿಸಿ ಮಾತನಾಡಿದ ಕಿಮ್, ‘ಅಮೆರಿಕ ಬಾಯಿ ಮಾತಿಗೆ ಮಾತ್ರ ಶಾಂತಿ ಬಯಸುತ್ತೇವೆ ಅನ್ನುತ್ತೆ. ಉತ್ತರ ಕೊರಿಯಾ ಮೇಲೆ ನಮಗೇನೂ ದ್ವೇಷ ಇಲ್ಲ ಅನ್ನುತ್ತೆ. ಆದ್ರೆ ಅಮೆರಿಕ ಹೇಳೋದೇ ಬೇರೆ. ಮಾಡೋದೇ ಬೇರೆ. ಇಡೀ ಪ್ರಪಂಚದಲ್ಲಿ ಆದೇಶವನ್ನ ನಂಬೋರು ಯಾರೂ ಇಲ್ಲ’ ಅಂತ ಕಿಮ್ ಹೇಳಿದ್ದಾರೆ. ಅಂದಹಾಗೆ ಕಿಮ್ ಅಧಿಕಾರಕ್ಕೆ ಬಂದ ನಂತರ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ಹಾಗೂ ಪರಮಾಣು ಅಸ್ತ್ರಗಳ ಪ್ರಯೋಗ ಎಲ್ಲ ಜೋರು ಮಾಡಿದೆ. 2017ರಲ್ಲಿ ಇಡೀ ಅಮೆರಿಕದ ಮೂಲೆ ಮೂಲೆಯನ್ನೂ ತಲುಪೋ ಕೆಪಾಸಿಟಿ ಇರುವ ಖಂಡಾಂತರ ಕ್ಷಿಪಣಿಯನ್ನೂ ಉತ್ತರ ಕೊರಿಯಾ ಯಶಸ್ವಿಯಾಗಿ ಪರೀಕ್ಷೆ ಮಾಡಿತ್ತು. ಹಾಗೂ ಇದುವರೆಗಿನ ತನ್ನ ಅತಿದೊಡ್ಡ ಪರಮಾಣು ಸ್ಪೋಟವನ್ನೂ ನಡೆಸಿ ಅಮೆರಿಕಕ್ಕೆ ಚಾಲೆಂಜ್ ಮಾಡಿತ್ತು. ಅಮೆರಿಕ ಮತ್ತೆ ದಾಳಿ ಮಾಡದಂತೆ ತಡೆಯಲು ನಾವು ಇದೆಲ್ಲ ಅಸ್ತ್ರಗಳನ್ನ ಗಳಿಸಿಕೊಳ್ಳದೇ ಬೇರೆ ದಾರಿಯಿಲ್ಲ ಅಂತ ಓಪನ್ನಾಗೇ ಆವಾಜ್ ಹಾಕಿದ್ದರು ಕಿಮ್ ಜಾಂಗ್.

-masthmagaa.com

Contact Us for Advertisement

Leave a Reply