ಕೇರಳ ಬಿಷಪ್ ‘ಲವ್ & ಡ್ರಗ್ಸ್ ಜಿಹಾದ್’ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ

masthmagaa.com:

ಕೇರಳದಿಂದಲೇ ಮತ್ತೊಂದು ವಿವಾದ ಕೂಡ ಇವತ್ತು ಭಾರೀ ಸುದ್ದಿಯಾಯ್ತು. ಕ್ರಿಶ್ಚಿಯನ್ನರ ಕೇರಳ ಬಿಷಪ್ ಜೋಸೆಫ್ ಕಲ್ಲರಂಗಟ್ ಕೊಟ್ಟ ಒಂದು ಹೇಳಿಕೆಯೇ ಈ ಸುದ್ದಿಯ ಮೂಲ. ಚರ್ಚಿನಲ್ಲಿ ಭಕ್ತರನ್ನ ಉದ್ದೇಶಿಸಿ ಮಾತನಾಡ್ತಿದ್ದ ಬಿಷಪ್, ಕೇರಳದಲ್ಲಿ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವತಿಯರನ್ನ ಲವ್ ಜಿಹಾದ್ ಹಾಗೂ ನಶಾ ಸಾಮಾಗ್ರಿ ಜಿಹಾದ್ ಮೂಲಕ ಹಾಳು ಮಾಡಲಾಗ್ತಿದೆ ಅಂತ ಸ್ಪೊಟಕ ಹೇಳಿಕೆ ಕೊಟ್ಟಿದ್ದಾರೆ. ಬರೀ ಕ್ರಿಶ್ಚಿಯನ್ ಯುವತಿಯರು ಮಾತ್ರವಲ್ಲ ಓವರಾಲ್ ಮುಸ್ಲಿಮರಲ್ಲದ ಯುವಕ-ಯುವತಿಯರು ಇದಕ್ಕೆ ಬಲಿಯಾಗ್ತಿದ್ದಾರೆ ಅಂತ ಕ್ರೈಸ್ತ ಧಾರ್ಮಿಕ ಗುರು ಜೋಸೆಫ್ ಕಲ್ಲರಂಗಟ್ ಹೇಳಿಕೆ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಅವ್ರು, ಭಾರತದ ಪ್ರಜಾಪ್ರಭುತ್ವ ದೇಶದಲ್ಲಿ ಬಂದೂಕು ತಗೊಂಡು ಇತರ ಧರ್ಮದವರನ್ನ ನಾಶ ಮಾಡಲು ಸಾಧ್ಯವಿಲ್ಲ ಅಂತ ಅವರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಲವ್ ಹಾಗೂ ನಶಾ ಜಿಹಾದ್ ಕೈಗೆತ್ತಿಕೊಂಡಿದ್ದಾರೆ’ ಅಂತ ಬಿಷಪ್ ಹೇಳಿದ್ದಾರೆ. ಕೆಲ ಸಲ ಈ ರೀತಿ ದಾರಿ ತಪ್ಪಿದ ನಮ್ಮವರನ್ನ ಉಗ್ರ ಸಂಘಟನೆಗಳು ಭಯೋತ್ಪಾದನಾ ಕೃತ್ಯಗಳಿಗೂ ಬಳಸಿಕೊಳ್ತಿದ್ದಾರೆ ಅಂತ ಅವ್ರು ಆರೋಪಿಸಿದ್ದಾರೆ.

19 ಕೇರಳಿಗರು ನಾಪತ್ತೆಯಾಗಿದ್ದಾರೆ ಅಂತ ಕೇರಳ ಸರ್ಕಾರವೇ ಕೇಂದ್ರ ಸರ್ಕಾರಿ ಏಜೆನ್ಸಿಗಳ ಬಳಿ ಸಹಾಯ ಕೇಳಿದ್ದಾರೆ, ಹಾಗೂ ಹಾಗೆ ನಾಪತ್ತೆಯಾದ ಕೆಲವರ ಕುಟುಂಬಸ್ಥರೇ ನಮ್ಮ ಮಕ್ಕಳು ಐಸ್ ಉಗ್ರ ಸಂಘಟನೆ ಸೇರಿದ್ದಾರೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ ಅನ್ನೋ ವರದಿಗಳನ್ನ ಉಲ್ಲೇಖಿಸಿ ಅವ್ರು ಈ ಮಾತುಗಳನ್ನ ಹೇಳಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿರೋ 19 ಜನರಲ್ಲಿ 10 ಯುವಕರು, 6 ಯುವತಿಯರು ಹಾಗೂ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಬಹುತೇಕರು ಕೇರಳದ ಕಾಸರಗೋಡು ಹಾಗೂ ಪಾಲಕ್ಕಾಡ್ ಜಿಲ್ಲೆಯವ್ರು.

ನಿಮಗೆಲ್ಲ ನೆನಪಿರಬಹುದು. ಕೆಲ ದಿನಗಳ ಹಿಂದಷ್ಟೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಒಂದು ತಾಲಿಬಾನಿಗಳ ಗುಂಪಿನ ವಿಡೀಯೋ ಶೇರ್ ಮಾಡಿದ್ದರು. ಇದರಲ್ಲಿ ಮಲಯಾಳಿ ಆಡಿಯೋ ಇದೆ. ಈ ಗುಂಪಲ್ಲಿ ಕೇರಳ ಮೂಲದವರೂ ಇರೋ ಥರ ಕಾಣ್ತಿದೆ ಅಂದಿದ್ರು. ಆಗ ಕೆಲವರು ಸರಿಯಾಗಿ ತಿಳಿದು ಮಾತಾಡಿ ಅಂತ ಆಕ್ರೋಷ ವ್ಯಕ್ತಪಡಿಸಿದಾಗ ಮತ್ತೆ ಶಶಿ ತರೂರ್ ಉತ್ತರ ಕೊಟ್ಟಿದ್ದರು. ನನಗೆ ಗೊತ್ತಿರೋದಕ್ಕೇ ಹೇಳ್ತಿರೋದು. ಕೇರಳದ ಅನೇಕ ಅಮ್ಮಂದಿರು-ಅಕ್ಕಂದಿರು ನನ್ನ ಬಳಿಯೇ ಬಂದು ಸಹಾಯ ಕೇಳಿದ್ದಾರೆ. ನಾನೇ ಅವರನ್ನೆಲ್ಲ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ ಅವರೊಂದಿಗೆ ಭೇಟಿ ಮಾಡಿಸಿದ್ದೆ ಅಂತ ಉತ್ತರ ಕೊಟ್ಟಿದ್ದರು.

ಆದ್ರೆ, ಈಗ ಕೇರಳದ ಕ್ರೈಸ್ತ ಬಿಷಪ್ ನೀಡಿರೋ ಹೇಳಿಕೆಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಪಿಸಿ ಚಾಕೋ ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಬಿಷಪ್ ಹೇಳಿಕೆಯನ್ನ ವಿನಯದಿಂದಲೇ ತಿರಸ್ಕರಿಸುತ್ತೇನೆ. ಕೇರಳದ ಸಹಬಾಳ್ವೆಯ ಸಮಾಜವನ್ನ ಹಾಳು ಮಾಡಲು ಯಾರೂ ಸಪೋರ್ಟ್ ಮಾಡಬಾರದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply