ಅಮೆರಿಕಾ ಮತ್ತೆ ಚಂದ್ರನ ಮೇಲೆ ಇಳಿಯಲಿಲ್ಲ ಯಾಕೆ..? ರೋಚಕ ಮಾಹಿತಿ..

ಹಾಯ್ ಫ್ರೆಂಡ್ಸ್…
ಅಮೆರಿಕ ಮತ್ತೆ ಯಾಕೆ ಚಂದ್ರನ ಮೇಲೆ ಮಾನವನನ್ನು ಇಳಿಸಿಲ್ಲ?
ಹೌದು… ಈ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತೆ. ಅಮೆರಿಕ ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ನಾವು ಅಂತ ಹೇಳುತ್ತದೆ. 1969ರಿಂದ 1972ರ ಅವಧಿಯಲ್ಲಿ ಅಮೆರಿಕ 6 ಬಾರಿ ಮಾನವನನ್ನ ಚಂದ್ರನ ಮೇಲೆ ಇಳಿಸಿತ್ತು. ಈ ಅವಧಿಯಲ್ಲಿ ಒಟ್ಟು 12 ನಾಸಾ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟರು. ಆದ್ರೆ ಕಡೆ ಬಾರಿ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದ್ದು 1972ರಲ್ಲಿ.! ಅಂದ್ರೆ ಈಗ ಆಲ್ಮೋಸ್ಟ್ 48 ವರ್ಷಗಳು ಕಳೆದು ಹೋದವು. ನಂತರ ಅಮೆರಿಕ ಆ ಸಾಹಸವನ್ನೇ ಮಾಡಲಿಲ್ಲ! ಯಾಕೆ?

ಈ ಪ್ರಶ್ನೆಗೆ ಉತ್ತರ ಇಂದಿಗೂ ನಿಗೂಢ!
ಚಾಲ್ತಿಯಲ್ಲಿವೆ ಒಟ್ಟು 3 ಥಿಯರಿಗಳು!
ನಿಜ ಫ್ರೆಂಡ್ಸ್… ಅಮೆರಿಕ 40-50 ವರ್ಷಗಳ ಹಿಂದೆಯೇ ಸಾಧಿಸಿದ್ದನ್ನು ಈಗ ಯಾಕೆ ಮಾಡುತ್ತಿಲ್ಲ ಅನ್ನೋದಕ್ಕೆ ಒಟ್ಟು 3 ಥಿಯರಿಗಳಿವೆ. ಆದರಲ್ಲಿ ಒಂದು ಥಿಯರಿ ಮಾತ್ರ ಸ್ವಲ್ಪ ಬೋಗಸ್ ಎನಿಸುತ್ತದೆ. ಕೇವಲ ಕಾಲ್ಪನಿಕ ಕಥೆ ಎನಿಸುತ್ತದೆ. ಅದೇ ಅನ್ಯಗ್ರಹ ಜೀವಿಗಳ ಥಿಯರಿ. ಈ ಥಿಯರಿಯನ್ನು ಮಸ್ತ್ ಮಗಾ ಕೂಡ ಒಪ್ಪೋದಿಲ್ಲ. ಆದ್ರೂ ಈ ಥಿಯರಿ ಏನು ಅಂತ ನಿಮಗೆ ಹೇಳಿಬಿಡುತ್ತೇವೆ ಕೇಳಿ. ಈ ಥಿಯರಿಯ ಪ್ರಕಾರ ನಾಸಾ ಅನ್ಯಗ್ರಹ ಜೀವಿಗಳ ಭಯದಿಂದಾಗಿ ಚಂದ್ರನ ಮೇಲೆ ಮತ್ತೆ ಕಾಲಿಡುವ ಸಾಹಸಕ್ಕೆ ಮುಂದಾಗಿಲ್ಲ. 6 ಬಾರಿ ಚಂದ್ರ ಯಾತ್ರೆ ಮಾಡಿದ ನಂತರ ಭೂಮಿ ಮೇಲೆ ಅನ್ಯಗ್ರಹ ಜೀವಿಗಳ ಕಣ್ಣು ಬಿತ್ತು. ಅನ್ಯಗ್ರಹ ಜೀವಿಗಳು ಗಗನಯಾತ್ರಿಗಳನ್ನು ಸಂಪರ್ಕ ಮಾಡಲು ಪ್ರಯತ್ನ ಪಟ್ಟಿದ್ದರು. ಇದೇ ಕಾರಣಕ್ಕೆ ಭಯಭೀತಗೊಂಡು ಅಮೆರಿಕ.. ಚಂದ್ರನ ಮೇಲೆ ಮಾನವ ನನ್ನ ಕಳಿಸುವ ಸಾಹಸವನ್ನು ಕಂಪ್ಲೀಟ್ ಆಗಿ ನಿಲ್ಲಿಸಿಬಿಡ್ತು ಅನ್ನೋ ವಾದ ಇದು. ಆದರೆ ಈ ವಾದಕ್ಕೆ ಯಾವುದೇ ವಿಜ್ಞಾನದ ಆಧಾರ ಇಲ್ಲ. ಅನ್ಯಗ್ರಹಜೀವಿಗಳು ಇದೆ ಅಂತ ಇದುವರೆಗೂ ಸಾಬೀತಾಗಿಲ್ಲ. ಅವು ಎಲ್ಲೂ ಇದುವರೆಗೂ ಸ್ಪಷ್ಟವಾಗಿ ಕಾಣಿಸಿಕೊಂಡಿಲ್ಲ. ಭೂಮಿಯನ್ನು ಹೊರತುಪಡಿಸಿ ಬಾಹ್ಯಾಕಾಶದಲ್ಲಿ ಬೇರ್ಯಾವುದೇ ಗ್ರಹದಲ್ಲಿ ಜೀವಿಗಳು ಇರೋ ಬಗ್ಗೆ ಇನ್ನು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅಮೆರಿಕದ ನಾಸಾ ಕೂಡ ಯಾವತ್ತೂ ಅನ್ಯಗ್ರಹ ಜೀವಿಗಳನ್ನು ತಾನು ಕಂಡ ಬಗ್ಗೆ ಹೇಳಿಕೊಂಡಿಲ್ಲ. ಹೀಗಾಗಿ ಮಸ್ತ್ ಮಗಾ ಚಾನೆಲ್ ತನ್ನ ವೀಕ್ಷಕರಿಗೆ ಈ ಥಿಯರಿಯನ್ನು ನಂಬಬಾರದು ಅಂತ ಮನವಿ ಮಾಡುತ್ತದೆ.

ಹಾಗಾದ್ರೆ ನಿಜವಾದ ಕಾರಣ ಏನು?
ಉಳಿದ ಎರಡು ಥಿಯರಿಗಳು ನಂಬೋ ರೀತಿ ಇವೆ. ಅದನ್ನು ನಾವು ನಿಮಗೆ ವಿವರಿಸುತ್ತೇವೆ ನೋಡಿ.

ಥಿಯರಿ ನಂ.1
ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದ್ದೆ ಸುಳ್ಳು!
ಹೌದು ಫ್ರೆಂಡ್ಸ್… ರಷ್ಯಾ ಸೇರಿದಂತೆ ಅಮೆರಿಕ ವಿರೋಧಿಗಳು ಈ ವಾದವನ್ನು ಮಂಡಿಸುತ್ತಾರೆ. ಅಮೆರಿಕದ ಬಳಿ ಈಗಲೂ ಚಂದ್ರನ ಮೇಲೆ ಮನುಷ್ಯನನ್ನ ಇಳಿಸುವ ಸಾಮರ್ಥ್ಯ ಇಲ್ಲ. ಅದೇ ಕಾರಣಕ್ಕೆ 2024ರ ಡೆಡ್ಲೈನ್ ಹಾಕಿಕೊಂಡಿದೆ. ಕಳೆದ 50 ವರ್ಷಗಳಿಂದಲೂ ಯೋಜನೆಯನ್ನು ಮುಂದಕ್ಕೆ ಹಾಕಿಕೊಂಡೆ ಬಂದಿದೆ. ಪರಿಸ್ಥಿತಿ ಹೀಗಿರುವಾಗ 48 ಐವತ್ತು ವರ್ಷಗಳ ಹಿಂದೆನೇ ಅಮೆರಿಕ ಚಂದ್ರನ ಮೇಲೆ ಮನುಷ್ಯನನ್ನು ಇಳಿಸಿತ್ತು ಅಂದ್ರೆ ಅದು ಹಾಸ್ಯಾಸ್ಪದ ಅನ್ನೋದು ಅಮೆರಿಕ ವಿರೋಧಿಗಳ ವಾದ. 2ನೇ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವೆ ನಡೆದ ಶೀತಲ ಸಮರದ ಸಮಯದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ತಾನು ಸ್ಟ್ರಾಂಗ್ ಅಂತ ಸಾಬೀತು ಮಾಡಲು ಅಮೆರಿಕ ಈ ಮಹಾ ನಾಟಕವನ್ನು ಸೃಷ್ಟಿ ಮಾಡಿತ್ತು ಅನ್ನೋ ಆರೋಪ ಇದೆ. ಅಮೆರಿಕದ ಅರಿಝೋನಾ ಮರುಭೂಮಿಯಲ್ಲಿ ಬೃಹತ್ ಸೆಟ್ ಗಳನ್ನು ಹಾಕಿ, ಚಂದ್ರನ ಮೇಲೆ ಕಾಲಿಟ್ಟ ನಾಟಕ ಆಡಿ ಜಗತ್ತನ್ನೇ ಮೂರ್ಖರನ್ನಾಗಿ ಮಾಡಿತ್ತು ಅಂತ ಟೀಕಿಸಲಾಗಿದೆ. ಇಲ್ಲದೆ ಹೋಗಿದ್ದರೆ, 50 ವರ್ಷಗಳ ಹಿಂದೆ ನೇ 6 ಸಲ ಚಂದ್ರನ ಮೇಲೆ ಕಾಲಿಟ್ಟಿದ್ದ ಅಮೆರಿಕ ಈ ಆಧುನಿಕ ಯುಗದಲ್ಲಿ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಯಾಕೆ ಸಾಧ್ಯವಾಗದೇ ಒದ್ದಾಡುತ್ತಿದೆ ಅನ್ನೋ ಪ್ರಶ್ನೆಯನ್ನ ಕೇಳಲಾಗುತ್ತಿದೆ. ಆಗ ತಂತ್ರಜ್ಞಾನ ಅಷ್ಟೊಂದು ಮುಂದುವರೆದಿರಲಿಲ್ಲ. ಆದರೆ ಈಗ ಟೆಕ್ನಾನಲಜಿ ತುಂಬಾ ಮುಂದುವರೆದಿದೆ. ಅಮೆರಿಕ ಜಗತ್ತಿನ ಕಣ್ಣಿಗೆ ಮಣ್ಣೆರಚಿ ಸುಳ್ಳು ನಾಟಕ ಆಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಐದ್ ವರ್ಷ ಬಿಟ್ಟು ಮಾಡುತ್ತೇವೆ…10 ವರ್ಷ ಬಿಟ್ಟು ಮಾಡ್ತೀವಿ ಅಂತ ಮುಂದಕ್ಕೆ ಹಾಕಿಕೊಂಡೆ ಬರ್ತಾ ಇದೆ. ಬರೀ ಡವ್ ಮಾಡ್ತಾ ಇದೆ ಅಂತ ಟೀಕಿಸಲಾಗುತ್ತಿದೆ.

ಥಿಯರಿ ನಂ.2
ವಿಪರೀತ ಖರ್ಚಿನ ಕಾರಣ!
ಹೌದು ವಿರೋಧಿಗಳು ಏನೇ ಹೇಳಿದರೂ, ಅಮೆರಿಕ ಮಾತ್ರ ಈ ವಾದವನ್ನೇ ಮುಂದಿಡುತ್ತಾ ಬಂದಿದೆ. ನಾವು ಚಂದ್ರನ ಮೇಲೆ ಕಾಲಿಟ್ಟಿದ್ದು ನಿಜ. ಆಗ ರಷ್ಯಾದ ವಿರುದ್ಧ ನಾವು ಮೇಲುಗೈ ಸಾಧಿಸಬೇಕಿತ್ತು ಹಾಗಾಗಿ ಅಷ್ಟೆಲ್ಲಾ ಖರ್ಚು ಮಾಡಿ ಮಾಡಿದ್ದೆವು. ಆದರೆ ಈಗ ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಸಾಮರ್ಥ್ಯವನ್ನು ಸಾಬೀತು ಮಾಡಿ ಆಗಿದೆ. ಒಟ್ಟು 6ಮಿಷನ್ ಗಳ ಮೂಲಕ 12 ಗಗನಯಾತ್ರಿಗಳನ್ನು ಚಂದ್ರನ ಮೇಲೆ ಲ್ಯಾಂಡ್ ಮಾಡಿಸಿದ್ದೇವೆ. ಅಲ್ಲಿ ಮತ್ತೆ ಮತ್ತೆ ಹೋಗಿ ನೋಡಿಕೊಂಡು ಬರೋಕೆ ಇನ್ನೇನೂ ಬಾಕಿ ಉಳಿದಿಲ್ಲ. ಹೀಗಾಗಿ ಲಕ್ಷಾಂತರ ಕೋಟಿ ಖರ್ಚಾಗುವ ಈ ಯೋಜನೆಯನ್ನು ನಾವು ನಿಲ್ಲಿಸಿದ್ದೇವೆ ಅಂತ ಅಮೆರಿಕಾ ಹೇಳಿಕೊಂಡು ಬಂದಿದೆ. ಆದರೂ ಒಂದಷ್ಟು ಜನ ಅಮೆರಿಕದ ಚಂದ್ರನ ಮೇಲಿನ ನಡಿಗೆಯನ್ನು ಮಹಾಸುಳ್ಳು ಅಂತಾನೆ ನಂಬಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಮತ್ತೊಂದು ಬಾರಿ, ಈ ಆಧುನಿಕ ಯುಗದಲ್ಲೇ ಇನ್ನೊಂದು ಬಾರಿ ಚಂದ್ರನ ಮೇಲೆ ಮನುಷ್ಯನನ್ನ ಇಳಿಸಿ ನಾವು ಸಾಬೀತು ಮಾಡಬೇಕು ಅಂತ ಹಠ ತೊಟ್ಟಿದ್ದಾರೆ. ನಾಸಾಗೆ 2024ರ ಒಳಗಾಗಿ ಮತ್ತೊಂದು ಬಾರಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ನಡೆದಾಡಿಸುವಂತೆ ಆರ್ಡರ್ ಮಾಡಿದ್ದಾರೆ. ನೋಡೋಣ ಅಮೆರಿಕ ಏನು ಮಾಡುತ್ತೆ ಅಂತ. ಒಂದುವೇಳೆ ಯಶಸ್ವಿಯಾಗಿ ಇದು ಸಾಧ್ಯವಾಗಿದ್ದೇ ಆದರೆ, ನಮ್ಮ-ನಿಮ್ಮ ಈಗಿನ ಜನರೇಶನ್ ಗೆ ಹೊಸ ಅದ್ಭುತ ದೃಶ್ಯ ಒಂದು ನೋಡಲು ಸಿಗುತ್ತದೆ.

Contact Us for Advertisement

Leave a Reply