ಮಂಗಳನ ಅಂಗಳದಲ್ಲಿ ಹಾರಾಟ ನಿಲ್ಲಿಸಿದ ʻಇಂಜೆನ್ಯುಯಿಟಿʼ!

masthmagaa.com:

ಮಂಗಳಗ್ರಹದ ಮೇಲಿದ್ದ ನಾಸಾದ ಪುಟ್ಟ ಹೆಲಿಕಾಪ್ಟರ್ ಇಂಜೆನುಯಿಟಿ(Ingenuity)‌ ತನ್ನ ಕಾರ್ಯಾಚರಣೆಯನ್ನ ಮುಗಿಸಿದೆ. ಈ ಪುಟಾಣಿ ರೋಬೋ ಹೆಲಿಕಾಪ್ಟರ್‌ 2021ರ ಏಪ್ರಿಲ್‌ನಲ್ಲಿ ಕೆಂಪು ಗ್ರಹದ ಮೇಲೆ ಇಳಿದಿತ್ತು. 5 ಬಾರಿ ಹಾರಾಟ ನಡೆಸೋಕೆ ಉದ್ದೇಶ ಇಟ್ಕೊಂಡು ಕಳಿಸಲಾದ ಈ ಕಾಪ್ಟರ್‌, ಹಾರಿದ್ದು ಮಾತ್ರ ಬರೋಬ್ಬರಿ 72 ಬಾರಿ. ಈ 72 ಫ್ಲೈಟ್‌ಗಳಲ್ಲಿ ಒಟ್ಟಾರೆಯಾಗಿ 128.8 ನಿಮಷಗಳು ಹಾರಾಟ ನಡೆಸಿದೆ. ಅಲ್ಲದೆ ಸುಮಾರು 17 ಕಿಲೋಮೀಟರ್‌ ದೂರ ಹಾರಿದೆ. ಒಮ್ಮೆ 78.7 ಅಡಿ ಎತ್ತರಕ್ಕೆ ರೀಚ್‌ ಆಗಿ ರೆಕಾರ್ಡ್‌ ಮಾಡಿದೆ. ಮಂಗಳ ಗ್ರಹದಲ್ಲಿ ತೀರ ತೆಳುವಾದ ವಾಯುಮಂಡಲ ಇರೋದ್ರಿಂದ ಇಂಜೆನುಯಿಟಿಯನ್ನ ಹಗುರವಾಗಿ, 2 ರೋಟರ್‌ಗಳನ್ನ ಹಾಕಿ ತಯಾರಿಸಲಾಗಿತ್ತು. ಇದರ 72ನೇ ಫ್ಲೈಟ್‌ನಲ್ಲಿ ರೋಟರ್‌ಗಳ ಬ್ಲೇಡ್‌ಗಳ ಪೈಕಿ ಒಂದು ಬ್ಲೇಡ್‌ಗೆ ಡ್ಯಾಮೇಜ್‌ ಆಗಿದೆ. ಈ ವೇಳೆ ಹೆಲಿಕಾಪ್ಟರ್‌ ಜೊತೆಗಿನ ಸಂಪರ್ಕ ಕೂಡ ಕಟ್‌ ಆಗಿ, ನಂತರ ವಾಪಸ್‌ ಕನೆಕ್ಷನ್‌ ರೀಸ್ಟೋರ್‌ ಮಾಡಲಾಗಿತ್ತು. ಹೆಲಿಕಾಪ್ಟರ್‌ ತೆಗೆದು ಕಳಿಸಿರೋ ನೆರಳಿನ ಫೋಟೋದಿಂದ ಡ್ಯಾಮೇಜ್‌ ಆಗಿರೋದು ಕನ್ಫರ್ಮ್‌ ಆಗಿದೆ. ಇದ್ರ ಬೆನ್ನಲ್ಲೇ ಇದೇ ಇಂಜೆನ್ಯುಯಿಟಿಯ ಕಡೆಯ ಫ್ಲೈಟ್‌ ಆಗಿತ್ತು ಅಂತ ನಾಸಾ ಅನೌನ್ಸ್‌ ಮಾಡಿದೆ.

-masthmagaa.com

Contact Us for Advertisement

Leave a Reply