ಬಾಹ್ಯಾಕಾಶದಿಂದ ನಿವೃತ್ತಿಯಾಗಲಿದೆ ISS!

masthmagaa.com:

ಈ ದಶಕದ ಅಂತ್ಯದ ವೇಳೆ International Space Station(ISS)ನ್ನ ನಿಷ್ಕ್ರಿಯಗೊಳಿಸಲಾಗುವುದು ಅಂತ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಈ ಹಿನ್ನಲೆಯಲ್ಲಿ ISSನ್ನ ಸುರಕ್ಷಿತವಾಗಿ ಡೀಆರ್ಬಿಟ್‌ ಮಾಡಲು ಅಂದ್ರೆ ಕಕ್ಷೆಯಿಂದ ಇಳಿಸಲು US Deorbit Vehicle (USDV)ನ್ನ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಿರೋದಾಗಿ ನಾಸಾ ಹೇಳಿದೆ. ಅಂದ್ಹಾಗೆ ಈ ಸ್ಪೇಸ್‌ ಸ್ಟೇಶನ್‌ನ್ನ 1998ರಿಂದ ನಾಸಾ, ESA, ಜಪಾನ್‌ನ ಜಾಕ್ಸಾ, ಕೆನಡಾದ ಬಾಹ್ಯಾಕಾಶ ಸಂಸ್ಥೆ ಹಾಗೂ ರಷ್ಯಾದ ROSCOSMOS ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು 2030ರವರೆಗೆ ISS ಕಾರ್ಯಾಚರಣೆ ನಡೆಸಲು ಈ ಪಾಲುದಾರ ದೇಶಗಳು ಒಪ್ಪಂದ ಮಾಡಿಕೊಡಿದ್ದು, ಇದಾದ ಬಳಿಕ ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸೋದು ಎಲ್ಲಾ ಸಂಸ್ಥೆಗಳ ಜವಾಬ್ದಾರಿಯಾಗಿದೆ.

-masthmagaa.com

Contact Us for Advertisement

Leave a Reply