ಭೂಮಿ ಕಕ್ಷೆ ಬಳಿ ಬಂದ ಕ್ಷುದ್ರಗ್ರಹದ ಗಸ್ತಿಗೆ ನೌಕೆ ಕಳಿಸಿದ ನಾಸಾ!

masthmagaa.com:

ಭೂಮಿ ಸೂರ್ಯನ ಸುತ್ತ ಸುತ್ತು ಹಾಕೋ ಕಕ್ಷೆ ಅಥ್ವಾ ರೂಟಿನ ಬಳಿ ಬಂದಿರೋ ಕ್ಷುದ್ರಗ್ರಹವೊಂದರ ಗಸ್ತಿಗಾಗಿ ನಾಸಾ ಒಂದು ನೌಕೆ ಲಾಂಚ್‌ ಮಾಡಿದೆ. God of Chaos ಅಂತಾನೇ ಕರೆಸಿಕೊಳ್ಳೋ Apophis ಅನ್ನೋ ಆಸ್ಟ್ರಾಯ್ಡ್‌, 2029ರ ಏಪ್ರಿಲ್‌ ವೇಳೆಗೆ ಭೂಮಿಯ ಪಕ್ಕದಲ್ಲಿ ಪಾಸ್‌ ಆಗ್ಲಿದೆ ಅಂತೇಳಲಾಗ್ತಿದೆ. ಕೇವಲ 32 ಸಾವಿರ ಕಿಲೋಮೀಟರ್‌ ಪಕ್ಕದಲ್ಲಿ ಈ ಆಸ್ಟ್ರಾಯ್ಡ್‌ ಪಾಸ್‌ ಆಗೋ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇದರ ಚಲನವಲನ ಗಮನಿಸೋಕೆ ನಾಸಾ ನೌಕೆ ಕಳಿಸಿದೆ. ಅಂದ್ಹಾಗೆ ಇತ್ತೀಚೆಗೆ ನಾಸಾದ OSIRIS-REx ಅನ್ನೋ ನೌಕೆ Bennu ಅನ್ನೋ ಸ್ಪೇಸ್‌ನಲ್ಲಿದ್ದ ಬಂಡೆಯೊಂದರ ಸ್ಪಾಂಪಲ್‌ ಕಲೆಕ್ಟ್‌ ಮಾಡಿ ವಾಪಾಸ್ ಬಂದಿತ್ತು. ಇದೇ ನೌಕೆಗೆ OSIRIS-APEX ಅಂತ ಹೆಸರು ಬದಲಾಯಿಸಿ ವಾಪಸ್‌ ಲಾಂಚ್‌ ಮಾಡಲಾಗಿದೆ. ಇದ್ರಲ್ಲಿ APEX ಅಂದ್ರೆ Apophis Explorer ಅಂತ. ಅಂದ್ರೆ ಇದು ಸ್ಟಡಿ ಮಾಡೋಕೆ ಹೊರಟಿರೋ ಕ್ಷುದ್ರಗ್ರಹ ಹೆಸರನ್ನೇ ಇಟ್ಟು ಇದನ್ನ ಲಾಂಚ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply