ಚಂದ್ರನ ಮೇಲೆ ಅಣು ವಿದ್ಯುತ್‌ ಉತ್ಪಾದನೆ! ನಾಸಾದಿಂದ ಮಾಡೆಲ್‌ ರೆಡಿ!

masthmagaa.com:

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ, ಚಂದ್ರನ ಮೇಲೆ ಅಣು ಶಕ್ತಿ ಉತ್ಪಾದನೆ ಮಾಡೋ ಯೋಜನೆಯ ಮೊದಲ ಹಂತವನ್ನ ಮುಗಿಸಿದೆ. ಈ ಪ್ರಾಜೆಕ್ಟ್‌ನ ಫಿಶನ್‌ ಸರ್ಫೇಸ್‌ ಪವರ್‌ ಅನ್ನೋ ಹಂತವನ್ನ ಕಂಪ್ಲೀಟ್‌ ಮಾಡಿದೆ. ಇದ್ರಲ್ಲಿ ನ್ಯೂಕ್ಲಿಯಾರ್‌ ಫಿಶನ್‌ ಅಥ್ವಾ ಪರಮಾಣು ವಿದಳನದ ಮೂಲಕ ವಿದ್ಯುತ್‌ ಉತ್ಪಾದಿಸೋ ಪುಟಾಣಿ ರಿಯಾಕ್ಟರ್‌ನ್ನ ಡಿಸೈನ್‌ ಮಾಡಿದೆ. ಅದರ ಮಾಡೆಲ್ಲನ್ನ ತಯಾರಿಸಿದೆ. ಈ ರಿಯಾಕ್ಟರ್ ಚಂದ್ರ ಅಷ್ಟೇ ಅಲ್ಲದೆ ಮಾರ್ಸ್‌ ಮಿಷನ್‌ಗಳಿಗೂ ಹೆಲ್ಪ್‌ ಆಗಲಿದೆ. ಇದ್ರ ಡಿಸೈನ್‌ ಮಾಡೋಕೆ ನಾಸಾ ಮೂರು ಖಾಸಗಿ ಕಂಪನಿಗಳಿಗೆ ತಲಾ 5 ಮಿಲಿಯನ್‌ ಡಾಲರ್‌ಗಳ ಕಾಂಟ್ರಾಕ್ಟ್‌ ನೀಡಿತ್ತು. ಇದೀಗ 6 ಟನ್‌ಗಿಂತ ಕಡಿಮೆ ತೂಕದ, ಸುಮಾರು 40 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದಿಸೋ ರಿಯಾಕ್ಟರ್‌ನ ಕಾನ್ಸೆಪ್ಟ್‌ ಡಿಸೈನ್‌ ರೆಡಿ ಮಾಡಿದೆ. ಹೌದು.. 6 ಟನ್‌ ಇದ್ರೂ ಇದನ್ನ ಪುಟಾಣಿ ರಿಯಾಕ್ಟರ್‌ ಅಂತ ಕರೀಬೇಕು. ಯಾಕಂದ್ರೆ ನಾರ್ಮಲ್‌ ನ್ಯೂಕ್ಲಿಯರ್‌ ರಿಯಾಕ್ಟರ್‌ಗಳು ಭಾರಿ ಗಾತ್ರದಲ್ಲಿರುತ್ವೆ. ಇನ್ನು ಈ ರಿಯಾಕ್ಟರ್‌ ಚಂದ್ರ ಅಥ್ವಾ ಮಂಗಳ ಗ್ರಹದಲ್ಲಿ, ಮುಂದೇನಾದ್ರೂ ವಿಜ್ಞಾನಿಗಳು ಸೆಟಲ್‌ ಆದ್ರೆ, ಅವರ ಬಳಕೆಗೆ, ಅಲ್ಲಿ ಓಡಾಡೋ ವಾಹನ ಅಥ್ವಾ ರೋವರ್‌ಗಳ ಬಳಕೆಗೆ, ವೈಜ್ಞಾನಿಕ ಪ್ರಯೋಗಗಳಿಗೆ ಪವರ್‌ ನೀಡುತ್ವೆ. ಅಲ್ಲದೇ ಭೂಮಿಯಂತ ಕಂಡೀಷನ್‌ ಇಲ್ಲದ ಪ್ರದೇಶಗಳಲ್ಲಿ ಸಾಂಪ್ರಧಾಯಿಕ ಇಂಧನಗಳು ಬಳಕೆಗೆ ಬರಲ್ಲ. ಸೋಲಾರ್‌ ಬಿಟ್ರೆ ಅಣು ವಿದ್ಯುತ್ತನ್ನ ಈಸಿಯಾಗಿ ಉತ್ಪಾದನೆ ಮಾಡ್ಬೋದು. ಸೋ ಈಗ ನಾಸಾ ಈ ನ್ಯೂಕ್ಲಿಯಾರ್‌ ಯೋಜನೆಗೆ ಕೈ ಹಾಕಿದೆ. ಇನ್ನು 2030ರ ವೇಳೆಗೆ ನಾಸಾ ಚಂದ್ರನ ಮೇಲೆ ಅಣು ಶಕ್ತಿ ಉತ್ಪಾದನೆ ಮಾಡೋ ಪ್ಲಾನ್‌ ಹಾಕೊಂಡಿದೆ.

-masthmagaa.com

Contact Us for Advertisement

Leave a Reply