ಸದ್ಯದಲ್ಲೇ ಬಾಹ್ಯಾಕಾಶಕ್ಕೆ ಮತ್ತೊಂದು ಕಣ್ಣು ಕಳುಹಿಸಲು ಸಿದ್ಧತೆ!

masthmagaa.com:

ಈಗಾಗಲೇ ತಡವಾಗಿರೋ ನಾಸಾದ ಜೇಮ್ಸ್​ ವೆಬ್ ಸ್ಪೇಸ್​ ಟೆಲಿಸ್ಕೋಪ್​​ನ್ನು ಇದೇ ಡಿಸೆಂಬರ್ 26ರಂದು ಬಾಹ್ಯಾಕಾಶಕ್ಕೆ ಕಳುಹಿಸಲು ನಾಸಾ ನಿರ್ಧರಿಸಿದೆ. ಈ ಯೋಜನೆ 1989ರಲ್ಲಿ ಶುರುವಾಗಿತ್ತು. ಇದನ್ನು 2000ರ ಆರಂಭದಲ್ಲೇ ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದ್ರೆ ನಾನಾ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದು ಇತಿಹಾಸದಲ್ಲೇ ಬಾಹ್ಯಾಕಾಶಕ್ಕೆ ಹೋಗ್ತಿರೋ ಅತಿ ಪವರ್​​ಫುಲ್ ಆಗಿರೋ ಟೆಲಿಸ್ಕೋಪ್ ಆಗಿದೆ. ಜೊತೆಗೆ ಬಜೆಟ್​​ಗಿಂತ ಮೂರು ಪಟ್ಟು ಜಾಸ್ತಿ ಅಂದ್ರೆ 10 ಬಿಲಿಯನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ ಸುಮಾರು 75 ಸಾವಿರ ಕೋಟಿ ರೂಪಾಯಿ ದುಡ್ಡು ಖರ್ಚು ಮಾಡಲಾಗಿದೆ. ಅಮೆರಿಕದಲ್ಲಿ ರಚನೆಯಾದ ಈ ಟೆಲಿಸ್ಕೋಪ್​​ನ್ನು ಉಡಾವಣೆ ಜಾಗವಾದ ಫ್ರೆಂಚ್ ಗಯಾನಾಗೆ ರವಾನಿಸಲಾಗಿತ್ತು. ಸದ್ಯ ಹಬಲ್ ಟೆಲಿಸ್ಕೋಪ್​​ ಬಾಹ್ಯಾಕಾಶದಲ್ಲಿ ಭೂಮಿಯ ಕಣ್ಣಿನ ರೀತಿಯಲ್ಲಿ ಕೆಲಸ ಮಾಡ್ತಿದೆ.

-masthmagaa.com

Contact Us for Advertisement

Leave a Reply