ನಾಸಾಗೆ ಮೆಸೇಜ್‌ ನೀಡಲು ಪುನಃ ಶುರು ಮಾಡಿದ ವೋಯೇಜರ್‌-1!

masthmagaa.com:

ಕಳೆದ ವರ್ಷ ನವೆಂಬರ್‌ನಲ್ಲಿ ಡೇಟಾ ಕಳಿಸೋದನ್ನೇ ನಿಲ್ಲಿಸಿದ್ದ ನಾಸಾದ ವೋಯೇಜರ್‌ 1 ಮಿಷನ್‌ ಈಗ ರೆಸ್ಪಾಂಡ್‌ ಮಾಡ್ತಿದೆ. ʻಹಾಯ್‌ ಇಟ್ಸ್‌ ಮಿʼ ಅಂತ ನಾಸಾಗೆ ಮೆಸೇಜ್‌ ಕಳಿಸಿದೆ. ನಮ್ಮಿಂದ ಅತ್ಯಂತ ದೂರದಲ್ಲಿರೋ ಮಾನವ ನಿರ್ಮಿತ ವೋಯೇಜರ್‌ 1 ಕೆಲ ತಿಂಗಳ ನಂತ್ರ ಪುನಃ ಅದ್ರ ಸ್ಟೇಟಸ್‌ ಬಗ್ಗೆ ಡೇಟಾ ಕಳಿಸೋಕೆ ಶುರು ಮಾಡಿದೆ ಅಂತ ನಾಸಾ ತಿಳಿಸಿದೆ. ಅಂದ್ಹಾಗೆ ಇದನ್ನ 1977ರಲ್ಲಿ ಲಾಂಚ್‌ ಮಾಡಲಾಗಿತ್ತು. 2012ರಲ್ಲಿ ಈ ವೋಯೇಜರ್‌ ಇಂಟರ್‌ಸ್ಟೆಲ್ಲಾರ್‌ ಮೀಡಿಯಂ ಅಂದ್ರೆ ಅಂತರತಾರಾ ಮಾಧ್ಯಮಕ್ಕೆ ಎಂಟ್ರಿ ಕೊಟ್ಟಿತ್ತು. ಸದ್ಯ ನಮ್ಮ ಭೂಮಿಯಿಂದ ಬರೋಬ್ಬರಿ 1500 ಕೋಟಿ ಮೈಲ್ಸ್‌ ಅಂದ್ರೆ ಸುಮಾರು 2,414 ಕೋಟಿ ಕಿಮೀ ದೂರದಲ್ಲಿದೆ. ಇನ್ನು ಭೂಮಿಯಿಂದ ಕಳಿಸಲಾದ ಮೆಸೇಜ್‌ ಈ ಸ್ಪೇಸ್‌ಕ್ರಾಫ್ಟ್‌ಗೆ ರೀಚ್‌ ಆಗೋಕೆ ಸುಮಾರು 22.5 ಗಂಟೆಗಳ ಕಾಲ ಬೇಕು.

-masthmagaa.com

Contact Us for Advertisement

Leave a Reply