ಆದಿಪುರುಷ್‌ ಸಿನಿಮಾ ಬ್ಯಾನ್‌ ತಡೆಹಿಡಿದ ನೇಪಾಳ ಹೈಕೋರ್ಟ್‌!

masthmagaa.com:

ಆದಿಪುರುಷ್‌ ಸಿನಿಮಾ ತಂಡ ನಿಟ್ಟುಸಿರು ಬಿಡೋ ಟೈಮ್‌ ಬಂದಿದೆ. ಒಂದಿಷ್ಟು ಜನ ಸಿನಿಮಾ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣಕ್ಕೆ ಅಪಚಾರ ಮಾಡಿದ್ದಾರೆ ಅಂತ ಸಿನಿಮಾ ತಂಡದ ಮೇಲೆ ಆರೋಪ ಮಾಡಿ, ಸಿನಿಮಾವನ್ನ ಬ್ಯಾನ್‌ ಮಾಡುವಂತೆ ಕಠ್ಮಂಡು ನಗರದ ಮೇಯರ್ ಕೋರ್ಟ್‌ ಮೊರೆ ಹೋಗಿದ್ರು.

“ಸೆನ್ಸಾರ್ ಬೋರ್ಡ್ ಒಪ್ಪಿಗೆ ನೀಡಿದ ಬಳಿಕ ಆ ಚಿತ್ರಗಳನ್ನು ಬ್ಯಾನ್ ಮಾಡಬಾರದು” ಅಂತ ಕೊರ್ಟ್ ಆದೇಶ ನೀಡಿದೆ. ಆದಿಪುರುಷ್‌ ಸಿನಿಮಾದಲ್ಲಿ “ಸೀತೆ ಭಾರತದ ಮಗಳು” ಅನ್ನೋ ಡೈಲಾಗ್‌ ಇತ್ತು. ಈ ಡೈಲಾಗ್‌ ಅನ್ನ ತೆಗೆದುಹಾಕುವಂತೆ ಅಥ್ವಾ ಕಟ್‌ ಮಾಡಿ ಅಂತ ನೇಪಾಳದ ಮಂದಿ ಆಕ್ರೋಶ ಹೊರ ಹಾಕಿದ್ರು. ‘ಸೀತೆ ನಮ್ಮವಳು’ ಎಂಬುದು ನೇಪಾಳದವರ ವಾದ. ಹೀಗಾಗಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು ಚಿತ್ರವನ್ನ ಬ್ಯಾನ್‌ ಮಾಡಬೇಕು ಅಂತ ಹೇಳಿದ್ರು ‘ಆದಿಪುರುಷ್’ ಚಿತ್ರದ ಸಿಟ್ಟನ್ನು ಭಾರತದ ಎಲ್ಲಾ ಸಿನಿಮಾಗಳ ಮೇಲೆ ತೋರಿಸಿ, ಹಿಂದಿ ಭಾಷೆಯ ಎಲ್ಲಾ ಚಿತ್ರಗಳನ್ನು ನೇಪಾಳದಲ್ಲಿ ಬ್ಯಾನ್ ಮಾಡುವಂತೆ ಆದೇಶ ನೀಡಿದ್ದರು.

ಆದ್ರೆ ಈಗ ನೇಪಾಳದ ಹೈಕೋರ್ಟ್ ಗುರುವಾರ (ಜೂನ್ 22) ಇದೇ ವಿಷಯಕ್ಕೆ ಸಂಬಂಧಿಸಿ ಆದೇಶ ಹೊರಡಿಸಿದೆ. ಪ್ರಭಾಸ್ ಅಭಿನಯದ ‘ಆದಿಪುರುಷ್’ ಸೇರಿದಂತೆ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧ ರದ್ದು ಮಾಡಿ ಆದೇಶ ನೀಡಿದೆ. ದೇಶದ ಸೆನ್ಸಾರ್ ಮಂಡಳಿಯು ಅಂಗೀಕರಿಸಿದ ಯಾವುದೇ ಸಿನಿಮಾದ ಪ್ರದರ್ಶನವನ್ನು ಸ್ಥಗಿತಗೊಳಿಸದಂತೆ ಅಧಿಕಾರಿಗಳಿಗೆ ಸೂಚಿನೆ ನೀಡಿದೆ.

-masthmagaa.com

Contact Us for Advertisement

Leave a Reply