ಚೀನಾಗೆ ಮುಖಭಂಗ! ಉಲ್ಟಾ ಹೊಡೆದ ನೇಪಾಳ

masthmagaa.com:
ಇತ್ತೀಚೆಗೆ ನೇಪಾಳದಲ್ಲಿ ಚೀನಾದ ಪ್ರಮುಖ ಯೋಜನೆ Belt and Road Initiative (BRI) ಅಡಿಯಲ್ಲಿ ಏರ್‌ಪೋರ್ಟ್‌ ನಿರ್ಮಾಣ ಮಾಡಲಾಗಿದೆ ಅಂತ ಚೀನಾ ಹೇಳಿಕೊಂಡಿತ್ತು. ಇದೀಗ ಚೀನಾದ ಈ ಕ್ಲೈಮ್‌ನ್ನ ನೇಪಾಳ ರಿಜೆಕ್ಟ್‌ ಮಾಡಿದೆ. ನೇಪಾಳದಲ್ಲಿ ಚೀನಾದ BRI ಅನ್ನ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ ಅಂತ ನೇಪಾಳ ವಿದೇಶಾಂಗ ಸಚಿವ ಎನ್‌.ಪಿ ಸೌದ್‌ ಅವ್ರು ತಿಳಿಸಿದ್ದಾರೆ. ಜೊತೆಗೆ ಚೀನಾ ಹಾಗೂ ನೇಪಾಳ BRI ಒಪ್ಪಂದಕ್ಕೆ ಸಹಿ ಹಾಕಿದ್ದು, ಇದುವರೆಗೂ ಈ ಯೋಜನೆಯನ್ನ ಜಾರಿಗೆ ತಂದಿಲ್ಲ ಅಂತ ಸೌದ್‌ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ನೂತನ ಪೋಖಾರ ಏರ್‌ಪೋರ್ಟ್‌ನ್ನ ನೇಪಾಳ ಪ್ರಧಾನ ಮಂತ್ರಿ ಪುಷ್ಟ ಕಮಲ್‌ ದಹಲ್‌ ಅವ್ರು ಉದ್ಘಾಟನೆ ಮಾಡಿದ್ರು. ಆ ಸಮಯದಲ್ಲಿ BRI ಯೋಜನೆ ಅಡಿಯಲ್ಲಿ ಒಂದು ಹೆಜ್ಜೆ ಮುಂದೆ ಇಡಲಾಗಿದೆ ಅಂತ ನೇಪಾಳದಲ್ಲಿರೋ ಚೀನಾ ರಾಯಭಾರಿ ಚೆನ್‌ ಸಾಂಗ್‌ ಅವ್ರು ಟ್ವೀಟ್‌ ಮಾಡಿದ್ರು. ಇದೀಗ ಈ ಹೇಳಿಕೆಯನ್ನ ನೇಪಾಳ ರಿಜೆಕ್ಟ್‌ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.
-masthmagaa.com

Contact Us for Advertisement

Leave a Reply