ಗಾಜಾ ಯುದ್ದದಲ್ಲಿ 13 ಸಾವಿರ ಉಗ್ರರನ್ನ ಸೆದೆಬಡೆದಿದ್ದೇವೆ: ನೆತನ್ಯಾಹು

masthmagaa.com:

ಗಾಜಾ ಯುದ್ದದಲ್ಲಿ ಇಸ್ರೇಲ್‌ ಸೇನೆ ಇಲ್ಲಿವರೆಗೆ ಪ್ಯಾಲಸ್ತೀನ್‌ನಲ್ಲಿದ್ದ ಕನಿಷ್ಠ 13 ಸಾವಿರ ಉಗ್ರರನ್ನ ಸೆದೆಬಡೆದಿದೆ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಅಂದ್ರೆ ನೆತನ್ಯಾಹು ಪರೋಕ್ಷವಾಗಿ ಹಮಾಸ್‌ಗಳ ಸಾವಿನ ಬಗ್ಗೆ ಮಾತಾಡಿದ್ದಾರೆ. ಆದ್ರೆ ಕಳೆದ ವರ್ಷ ಅಕ್ಟೊಬರ್‌ 7ರಿಂದ ನಡಿತಿರೊ ಗಾಜಾ ಕದನದಲ್ಲಿ ಇಲ್ಲಿವರೆಗೆ 31 ಸಾವಿರ ಜನ ಮೃತಪಟ್ಟಿದ್ದಾರೆ ಅಂತ ಪ್ಯಾಲಸ್ತೀನ್‌ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಅದ್ರಲ್ಲಿ 72% ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ ಅಂತೇಳಿರೊ ಪ್ಯಾಲಸ್ತೀನ್ ಅಧಿಕಾರಿಗಳು, ಉಗ್ರರ ಸಾವಿನ ಅಂಕಿ ಅಂಶಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲ್ಲ.

-masthmagaa.con

Contact Us for Advertisement

Leave a Reply