ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಲಕ್ಷ ದಾಟಿದ ಡೈಲಿ ಕೊರೋನಾ ಸಂಖ್ಯೆ!

masthmagaa.com:

ಯುನೈಟೆಡ್​ ಕಿಂಗ್​ಡಮ್​ನಲ್ಲಿ ಒಮೈಕ್ರಾನ್ ಹಾವಳಿ ಮಿತಿ ಮೀರಿದೆ. ಕೊರೋನಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯುನೈಟೆಡ್ ಕಿಂಗ್​ಡಮ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ 1.6 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ಇಲ್ಲಿ ಸುಮಾರು 6 ಕೋಟಿ ಜನಸಂಖ್ಯೆ ಇದ್ದು, ಈಗಾಗಲೇ 3 ಕೋಟಿ ಜನ ಬೂಸ್ಟರ್ ಶಾಟ್ ಕೂಡ ತಗೊಂಡಾಗಿದೆ. ಆದ್ರೂ ಕೂಡ ಕೊರೋನಾ ಮಿಂಚಿನ ವೇಗದಲ್ಲಿ ಹರುಡತ್ತಿದೆ. ಈ ನಡುವೆ 5ರಿಂದ 11 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ಹಾಕಲು ಯುನೈಟೆಡ್ ಕಿಂಗ್​ಡಮ್ ಅಸ್ತು ಎಂದಿದೆ.

-masthmagaa.com

Contact Us for Advertisement

Leave a Reply