ನೂತನ ಪಾರ್ಲಿಮೆಂಟ್‌ ಕಟ್ಟಡಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ!

masthmagaa.com:

ನೂತನ ಸಂಸತ್ ಭವನವನ್ನ ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುವ ಸಾಧ್ಯತೆಯಿದೆ ಅಂತ ತಿಳಿದು ಬಂದಿದೆ. ಹೊಸ ಕಟ್ಟಡದ ನಿರ್ಮಾಣ ಅಂತಿಮ ಹಂತದಲ್ಲಿದೆ. ಮೋದಿಯವರು ತಮ್ಮ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 28ರಂದು ಹೊಸ ಸಂಸತ್‌ ಭವನವನ್ನ ಉದ್ಘಾಟಿಸಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಈ ನೂತನ ಸಂಸತ್‌ ಭವನ 4 ಅಂತಸ್ತಿನ ಕಟ್ಟಡವಾಗಿದ್ದು, 1,224 ಸಂಸದರ ಸಾಮರ್ಥ್ಯವನ್ನ ಹೊಂದಿದೆ. ಸುಮಾರು 970 ಕೋಟಿ ರೂಪಾಯಿ ಖರ್ಚಿನಲ್ಲಿ ಈ ಭವ್ಯ ಕಟ್ಟಡವನ್ನ ನಿರ್ಮಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಮೇ 16, 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

-masthmagaa.com

Contact Us for Advertisement

Leave a Reply