ಎರಡನೇ ಟೆಸ್ಟ್​ನ ಮೊದಲ ದಿನವೇ ಕೊಹ್ಲಿ ಪಡೆ ಸರ್ವಪತನ

ಕ್ರೈಸ್ಟ್​ಚರ್ಚ್​: ಮೊದಲನೇ ಟೆಸ್ಟ್ ಪಂದ್ಯವನ್ನ ಹೀನಾಯವಾಗಿ ಸೋತ ಕೊಹ್ಲಿ ಪಡೆ ಶನಿವಾರ ಆರಂಭಗೊಂಡ 2ನೇ ಟೆಸ್ಟ್​ನಲ್ಲೂ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕನ ನಿರ್ಧಾರವನ್ನ ಕಿವೀಸ್ ವೇಗಿಗಳು ಸಮರ್ಥಿಸಿಕೊಂಡರು. ವೇಗಿ ಕೈಲ್ ಜೇಮಿಸನ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಮೊದಲ ದಿನವೇ 242 ರನ್ ಗಳಿಸಿ ಆಲೌಟಾಗಿದೆ. ಜೇಮಿಸನ್ 14 ಓವರ್​ಗಳಲ್ಲಿ 45 ರನ್​ಗಳಿಗೆ 5 ವಿಕೆಟ್ ಕಿತ್ತು ಮಿಂಚಿದರು. ವೃತ್ತಿ ಬದುಕಿನ 2ನೇ ಟೆಸ್ಟ್‌ ಆಡುತ್ತಿರುವ ಜೇಮಿಸನ್, 45ಕ್ಕೆ 5 ವಿಕೆಟ್‌ ಪಡೆದು ವೃತ್ತಿ ಬದುಕಿನ ಚೊಚ್ಚಲ 5 ವಿಕೆಟ್‌ ಸಂಪಾದನೆ ಮಾಡಿದ್ರು. ಭಾರತ ಪರ ಹನುಮ ವಿಹಾರಿ 55, ಪೃಥ್ವಿ ಶಾ 54 ಹಾಗೂ ಚೇತೇಶ್ವರ ಪೂಜಾರ 54 ರನ್​ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್​ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೆ 63 ರನ್​ ಕಲೆ ಹಾಕಿತು.

Contact Us for Advertisement

Leave a Reply