ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಳ್ತಾರಾ ನಿತೀಶ್‌ ಕುಮಾರ್?

masthmagaa.com:

INDIA ಮೈತ್ರಿ ಕೂಟದ ಕಾಲುಗಳು ಒಂದೊಂದಾಗಿ ಕುಸಿತಾ ಇರೋದ್ರ ಮಧ್ಯೆ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಕೂಡ ಈ ಒಕ್ಕೂಟಕ್ಕೆ ಕೈ ಕೊಡೋ ತರ ಕಾಣ್ತಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಹಾರದಲ್ಲಿ ಬಿಜೆಪಿ ಜೊತೆ ನಿತೀಶ್‌ರ ಜೆಡಿಯು ಪಾರ್ಟಿ ಮೈತ್ರಿ ಮಾಡಿಕೊಳ್ಳಲಿದೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ. ಇತ್ತ INDI ಮೈತ್ರಿ ಕೂಟದಿಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ TMC ಪಾರ್ಟಿ ಹಾಗೂ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರೋ ಬೆನ್ನಲ್ಲೆ ನಿತೀಶ್‌ ಈ ಕೂಟಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply