ಸಲಿಂಗ ಮದುವೆ ಕಾನೂನು ಮಾನ್ಯತೆ: ಇಂದಿನಿಂದ ವಿಚಾರಣೆ ಆರಂಭ

masthmagaa.com:

ಸಲಿಂಗ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿರೊ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂಕೋರ್ಟ್‌ ಇಂದಿನಿಂದ ಆರಂಭಿಸಿದೆ. ಮುಖ್ಯ ನಾಯಾಧೀಶ ಡಿವೈ ಚಂದ್ರಚೂಡ್‌ ಸೇರಿದಂತೆ ಐವರು ನ್ಯಾಯಾಧೀಶರನ್ನ ಒಳಗೊಂಡ ಸಂವಿಧಾನ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ಪರವಾಗಿ ಎಸ್‌ ಜಿ ತುಷಾರ್‌ ಮೆಹ್ತಾ ವಾದ ಮಂಡಿಸಿದ್ರೆ, ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸುತ್ತಿದ್ದಾರೆ. ಈ ವೇಳೆ ವಿಚಾರಣೆಯಲ್ಲಿ ಉಪಸ್ಥಿತರಿರುವ ಜನರು ದೇಶದ ದೃಷ್ಟಿಕೋನವನ್ನ ಪ್ರತಿನಿಧಿಸೋಕೆ ಆಗಲ್ಲ. ಈ ಮ್ಯಾಟರ್‌ನ್ನ ಕೋರ್ಟ್ ವಿಚಾರಣೆ ನಡೆಸಬಹುದಾ‌ ಅನ್ನೊದನ್ನ ಮೊದಲು ಪರೀಕ್ಷಿಸಬೇಕು ಅಂತ ತುಷಾರ್‌ ಮೆಹ್ತಾ ಕೇಂದ್ರದ ಪರವಾಗಿ ವಾದ ಮಂಡಿಸಿದ್ದಾರೆ. ಇತ್ತ ಈ ಹಿಂದೆ ಸಲಿಂಗಕಾಮವನ್ನ ಅಪರಾಧಮುಕ್ತ ಮಾಡಿರೊ ನ್ಯಾಯಾಲಯದ ಆದೇಶ ಹಾಗೂ ತೀರ್ಪುಗಳ ಆಧಾರದ ಮೇಲೆ ಸಲಿಂಗ ವಿವಾಹಕ್ಕೆ ಅನುಮತಿ ನೀಡಬೇಕು ಅಂತ ಅರ್ಜಿ ಪರ ವಾದ ಮಾಡಿದ ಮುಕುಲ್‌ ರೋಹಟಗಿ ವಕೀಲರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply