ಆರ್ಯನ್​​​ ಜಾಮೀನು ಅರ್ಜಿ ವಜಾ! ಖಾನ್ ಪುತ್ರನಿಗೆ ಜೈಲೇ ಗಟ್ಟಿ

masthmagaa.com:

ಕ್ರೂಸ್​​ ಶಿಪ್​ ಪಾರ್ಟಿ ವೇಳೆ ಮಾದಕ ವಸ್ತು ಸಿಕ್ಕ ಪ್ರಕರಣದಲ್ಲಿ ಸಿಕ್ಕಾಕೊಂಡಿರೋ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ನ ಜಾಮೀನು ಅರ್ಜಿಯನ್ನ ಮುಂಬೈ ಕೋರ್ಟ್ ತಿರಸ್ಕರಿಸಿದೆ. ಇದರ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್​ಮುನ್​ ಧಮೇಚಾರ ಬೇಲ್​ ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಕೋರ್ಟ್​ನಲ್ಲಿ ಬೇಲ್ ಅರ್ಜಿ ಕುರಿತು ವಾದ ಪ್ರತಿವಾದ ನಡೆದಾಗ, ಆರ್ಯನ್​ ಖಾನ್​ ಗೌರಾನ್ವಿತ​ ಕುಟುಂಬದಿಂದ ಬಂದಿದ್ದಾನೆ, ಅವರ ಕುಟುಂಬಕ್ಕೆ ಸಮಾಜದಲ್ಲಿ ಒಳ್ಳೇ ಹೆಸರಿದೆ, ಹೀಗಾಗಿ ಆರ್ಯನ್​ ಖಾನ್​ಗೆ ಬೇಲ್​ ಕೊಟ್ರೆ ಅವ್ನು ಎಲ್ಲಿಗೂ ಓಡೋಗಲ್ಲ ಅಂತೆಲ್ಲಾ ಆರ್ಯನ್ ಪರ ವಕೀಲರು ವಾದ ಮಂಡಿಸಿದ್ರು. ಆದ್ರೆ ಕೋರ್ಟ್ ಇದಕ್ಕೆಲ್ಲಾ ಒಪ್ಪಿಲ್ಲ. ಸದ್ಯ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳು ಮುಂಬೈನ ಅರ್ಥರ್ ರೋಡ್​ ಜೈಲು ಪಾಲಾಗಿದ್ದಾರೆ. ಇವರನ್ನ ಮೂರರಿಂದ ಐದು ದಿನಗಳ ಮಟ್ಟಿಗೆ ಕ್ವಾರಂಟೈನ್​ ಸೆಲ್​​ನಲ್ಲಿ ಇಡಲಾಗುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇವತ್ತು ಆರ್ಯನ್ ಖಾನ್ ತಾಯಿ ಗೌರಿ ಖಾನ್ ಬರ್ತ್​ಡೇ. ಸೋ ಅಮ್ಮನ ಬರ್ತ್​​ಡೇ ದಿನ ಮಗನಿಗೆ ಬೇಲ್​ ಸಿಗಹುದು ಅಂತೆಲ್ಲಾ ಹೇಳಲಾಗಿತ್ತು. ಆದ್ರೆ ಅದು ಆಗಿಲ್ಲ.

-masthmagaa.com

Contact Us for Advertisement

Leave a Reply